ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ತುಘಲಕ್ ಯುಗ ಮತ್ತೆ ಆರಂಭವಾದಂತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ನರೇಂದ್ರ ಮೋದಿ #Narendra Modi ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಅನ್ಯ ಮತೀಯರ ಗುಂಪೊಂದು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿ, ಚೂರಿಯಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್’ನಲ್ಲಿ ನಡೆದಿತ್ತು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಬಿಜೆಪಿ, ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದರೆ ರಾಜ್ಯಸಭಾ ಸೀಟು, ಭಾರತ್ ಮಾತಾ ಕೀ ಜೈ ಎಂದರೆ ಕಲ್ಲೇಟು. ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗುವುದು ಸುರಕ್ಷಿತವಲ್ಲ ಎಂದಿದೆ.
Also read: ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಲ್ಲೆ ಖಂಡನೀಯ : ಎಂಎಲ್’ಸಿ ಡಾ.ಧನಂಜಯ ಸರ್ಜಿ ಕಿಡಿ
ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗುವುದು ಸುರಕ್ಷಿತವಲ್ಲ. ತುಘಲಕ್ ಯುಗ ಮತ್ತೆ ಬಂದಂತೆ ಭಾಸವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ಭಾರತದ ವಿರುದ್ಧ ಬೆಳೆಯುತ್ತಿರುವ ದ್ವೇಷವು ಆತಂಕಕಾರಿಯಾಗಿದೆ ಎಂದಿದೆ.
ಮಂಗಳೂರಿನಲ್ಲಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ ಪ್ರಧಾನಿ ಮೋದಿಯವರ ಚುನಾವಣಾ ಗೆಲುವಿನ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರಾದ ಹರೀಶ್ ಅಂಚನ್ ಮತ್ತು ನಂದಕುಮಾರ್ ಅವರ ಮೇಲೆ ಅಬೂಬಕ್ಕರ್, ಬಶೀರ್, ಸಿದ್ದಿಕ್, ಮೋನು ಮತ್ತು ಇತರ 20 ಮಂದಿ ಬರ್ಬರವಾಗಿ ಇರಿದಿದ್ದಾರೆ ಎಂದು ದೂರಿದೆ.
ಈ ಹೇಯ ಕೃತ್ಯವು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಹದಗೆಟ್ಟ ಕಾನೂನು-ಸುವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಹಿಂಸಾತ್ಮಕ ಘಟನೆಗಳು ಮತ್ತು ಅನಿಯಂತ್ರಿತ ಆಕ್ರಮಣಶೀಲತೆಯ ಹೆಚ್ಚಳವು ಭಯ ಮತ್ತು ಅಸ್ಥಿರತೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದು ನಾಗರಿಕರನ್ನು ರಕ್ಷಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಬಲವಾದ ಆಡಳಿತ ಮತ್ತು ಭದ್ರತಾ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























