ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಪ್ರಶ್ನೆಯೇ ಇಲ್ಲ. ಇಂಧನ ಇಲಾಖೆ ರೈತ ಸ್ನೇಹಿಯಾಗಿದ್ದು, ರೈತರಿಗೆ ತೊಂದರೆಯಾಗುವಂತಹ ಯಾವ ಕೆಲಸಕ್ಕೂ ಬಿಜೆಪಿ ಸರಕಾರ ಕೈಹಾಕುವುದಿಲ್ಲ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ Minister Sunil Kumar ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿದ್ಯುತ್ ಸರಬರಾಜು ಕಂಪನಿಗಳಿಗೆ ನ್ಯಾಯಯುತವಾಗಿ ನೀಡಬೇಕಿದ್ದ ಸಬ್ಸಿಡಿ ಹಣವನ್ನು ಸಕಾಲದಲ್ಲಿ ನೀಡದೇ ನಷ್ಟಕ್ಕೆ ದೂಡಿ, ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದರು,” ಎಂದು ಗಂಭೀರ ಆರೋಪ ಮಾಡಿದರು.

Also read: ಸೋತಾಗ ಮೇಲೆತ್ತುವ ಕೈಗಳು ನೀವಾಗಿ: ಜಿ.ಎಸ್. ನಾರಾಯಣರಾವ್
”ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದು ಶತಸಿದ್ಧ. ಆದರೆ, ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ನಾವು ಅಧಿಕಾರ ವಹಿಸಿಕೊಂಡಾಗ ಎಲ್ಲ ಎಸ್ಕಾಂಗಳು ನಷ್ಟದಲ್ಲಿದ್ದವು. ಸಿಎಂ ಬೊಮ್ಮಾಯಿ ಅವರು 8,500 ಕೋಟಿ ಅನುದಾನ ನೀಡಿ ಕೊರತೆ ಸರಿದೂಗಿಸಿದ್ದಾರೆ,” ಎಂದರು.










Discussion about this post