ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ತಿರುಪತಿ |
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ #Shivarajkumar ಅವರು ಕುಟುಂಬ ಸಹಿತ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ #Thirupathi Thimmappa ದರ್ಶನ ಪಡೆದು ಮುಡಿ ಕೊಟ್ಟಿದ್ದಾರೆ.
ಶಿವರಾಜಕುಮಾರ್ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಲ್ಲದೇ, ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರು ತಿಮ್ಮಪ್ಪನ ಸಂಪ್ರೀತಿಗಾಗಿ ತಮ್ಮ ಮುಡಿ ಕೊಟ್ಟಿದ್ದಾರೆ.
Also read: ಇದು ಮಲೆನಾಡಿನಲ್ಲೇ ಪ್ರಥಮ | ಐತಿಹಾಸಿಕ ಹೆಜ್ಜೆ ಇಟ್ಟ ಸರ್ಜಿ ಆಸ್ಪತ್ರೆಯಲ್ಲಿ ಇನ್ಮುಂದೆ ಎಲ್ಲವೂ ಡಿಜಿಟಲ್
ಇತ್ತೀಚೆಗಷ್ಟೇ ಬಿಡುಗಡೆಯಾದ ಶಿವಣ್ಣ ಅಭಿನಯದ ಭೈರತಿ ರಣಗಲ್ ಚಿತ್ರ ಯಶಸ್ಸು ಕಂಡಿದ್ದು, ಇದರ ಸಂಭ್ರಮದಲ್ಲಿ ಇಡೀ ಹ್ಯಾಟ್ರಿಕ್ ಹೀರೋ ಕುಟುಂಬವಿದೆ.
ಆದರೆ, ಇದೇ ವೇಳೆ ಶಿವಣ್ಣ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೇ ಶಿವಣ್ಣ ಅವರು ಕುಟುಂಬ ಸಹಿತ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.
ಚಿಕಿತ್ಸೆಗಾಗಿ ಶಿವಣ್ಣ ಅಮೆರಿಕಕ್ಕೆ ತೆರಳಲಿದ್ದು, ಅವರಿಗೆ ಏನಾಗಿದೆ ಎಂಬ ವಿಚಾರ ಇನ್ನೂ ಬಹಿರಂಗಗೊಳಿಸಿಲ್ಲ. ಆದರೆನ ಚಿಕಿತ್ಸೆಗೆ ತೆರಳುವ ಮುನ್ನ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದಾರೆ.
ಕೆಲವು ತಿಂಗಳು ಸಿನಿಮಾ ಕೆಲಸಗಳಿಂದ ದೂರ ಇರುವ ನಿರ್ಧಾರವನ್ನು ಶಿವಣ್ಣ ಕೈಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಕಾರಣಕ್ಕಾಗಿಯೇ ತಮ್ಮ ಎಲ್ಲ ಸಿನಿಮಾ ಕಮಿಟ್ಮೆಂಟ್’ಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಸಿನಿಮಾ ಸಂಬಂಧಿತ ಎಲ್ಲ ಹೊಸ ಕೆಲಸಗಳನ್ನು ಅವರು ಮುಂದಕ್ಕೆ ಹಾಕಿದ್ದಾರೆ.
ಶಿವಣ್ಣ ಅವರೊಂದಿಗೆ ಪುತ್ರಿ ನಿವೇದಿತಾ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ ಹಲವರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post