No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಇದು ಮಲೆನಾಡಿನಲ್ಲೇ ಪ್ರಥಮ | ಐತಿಹಾಸಿಕ ಹೆಜ್ಜೆ ಇಟ್ಟ ಸರ್ಜಿ ಆಸ್ಪತ್ರೆಯಲ್ಲಿ ಇನ್ಮುಂದೆ ಎಲ್ಲವೂ ಡಿಜಿಟಲ್

ರೋಗಿಗಳು ಚೀಟಿ, ರಿಪೋರ್ಟ್ ಪಡೆಯುವುದು ಹೇಗೆ? MLC, ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ. ಧನಂಜಯ ಸರ್ಜಿ ಮಾಹಿತಿ

kalpa News by kalpa News
December 7, 2024
in ಶಿವಮೊಗ್ಗ
0
ಇದು ಮಲೆನಾಡಿನಲ್ಲೇ ಪ್ರಥಮ | ಐತಿಹಾಸಿಕ ಹೆಜ್ಜೆ ಇಟ್ಟ ಸರ್ಜಿ ಆಸ್ಪತ್ರೆಯಲ್ಲಿ ಇನ್ಮುಂದೆ ಎಲ್ಲವೂ ಡಿಜಿಟಲ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಸರ್ಜಿ ಆಸ್ಪತ್ರೆಗಳ ಸಮೂಹವು ಮಲೆನಾಡಿನ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಇಡುತ್ತಿದ್ದು ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಪೇಪರ್ ಲೆಸ್ (ಕಾಗದ ಮುಕ್ತ) #PaperlessHospital ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದ್ದು, ಎಲ್ಲ ಸೇವೆಗಳು ಇನ್ನು ಮುಂದೆ ಡಿಜಲೀಕರಣದ ಮೂಲಕ ನಡೆಯಲಿವೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ. ಧನಂಜಯ ಸರ್ಜಿ #DrDhananjayaSarji ಮಾಹಿತಿ ನೀಡಿದರು.

ಶನಿವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನೆರೆ-ಹೊರೆಯ ಯಾವುದೇ ಜಿಲ್ಲೆಯ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಶಿವಮೊಗ್ಗ #Shivamogga ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೇಪರ್ ಲೆಸ್ ಆಸ್ಪತ್ರೆಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆಸ್ಪತ್ರೆಗೆ ಬರುವ ಒಳ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್ ಲೈನ್ #Online ಮೂಲಕ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಸರ್ಜಿ ಆಸ್ಪತ್ರೆಗಳ ಸಮೂಹದ ಎಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಭಾರತದಲ್ಲಿ ಒಂದು ವರ್ಷಕ್ಕೆ 40.5 ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ. ಅಂದಾಜಿನ ಪ್ರಕಾರ ಪ್ರತಿ 2 ಸೆಕೆಂಡ್ ಗೆ 1 ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ 24 ಮರಗಳನ್ನು ಕಡಿಯಬೇಕಾಗುತ್ತದೆ, ಒಂದು ಟನ್ ನಲ್ಲಿ 2 ಲಕ್ಷ A4 ಶೀಟ್ ಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ಆಸ್ಪತ್ರೆಗೆ 6 .50 ಲಕ್ಷ B4 ಶೀಟ್ ಬಳಸಲಾಗುತ್ತಿತ್ತು. ಇದರ ಪ್ರಕಾರ ನಾವು ವರ್ಷಕ್ಕೆ ಈ ಒಂದು ಆಸ್ಪತ್ರೆಯಿಂದ 76 ಮರಗಳನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯನ್ನು ಪೇಪರ್ ಲೆಸ್ ಮಾಡುವ ಮೂಲಕ ವರ್ಷಕ್ಕೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದರಿಂದಲೇ ವರ್ಷಕ್ಕೆ 76 ಮರಗಳನ್ನು ಉಳಿಸಿದಂತಾದರೆ, ಸರ್ಜಿ ಆಸ್ಪತ್ರೆಗಳ #SarjiHospital ಸಮೂಹದಿಂದ ವರ್ಷಕ್ಕೆ 250 ಮರಗಳನ್ನು ಉಳಿಸಿದಂತಾಗುತ್ತದೆ. 1 ಮರ 1 ವರ್ಷಕ್ಕೆ 10 ಜನರಿಗೆ ಆಮ್ಲಜನಕವನ್ನು ಒದಗಿಸುತ್ತದೆ, ಅಂದರೆ ವರ್ಷಕ್ಕೆ 2,500 ಜನರಿಗೆ ಆಮ್ಲಜನಕವನ್ನು ಕೊಡುವ ಮರಗಳನ್ನು ಉಳಿಸಿದಂತಾಗುತ್ತಿದೆ ಎಂದರು.

ಭಾರತದಲ್ಲಿ ಅತಿ ಹೆಚ್ಚು ಪೇಪರ್ ಬಳಸುವ ಕ್ಷೇತ್ರಗಳ ಪೈಕಿ ಆರೋಗ್ಯ ಕ್ಷೇತ್ರವು 5 ನೇ ಸ್ಥಾನದಲ್ಲಿದೆ. ಪೇಪರ್ ಉತ್ಪಾದನೆಗೆ ಮರ ಒಂದೇ ಅಲ್ಲ, ನೀರನ್ನು ಕೂಡ ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತದೆ. 1 A4 ಅಳತೆಯ ಪೇಪರ್ ತಯಾರಿಸಲು ಸುಮಾರು 10 ರಿಂದ 20 ಲೀಟರ್ ನೀರು ಬಳಕೆಯಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಒಂದು ಲೀಟರ್ ಗಿಂತ ಹೆಚ್ಚಿನ ನೀರು ರಾಸಾಯನಿಕಗಳಿಂದ ಮಲೀನವಾಗಿ ನದಿಗಳಿಗೆ ಸೇರುತ್ತಿದೆ. ನಮ್ಮ ಸಂಸ್ಥೆಯಿಂದ 21 ಲಕ್ಷ ಲೀಟರ್ ನೀರು ಮಲಿನಗೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ ಹಾಗೂ 8750 ಕೆ.ಜಿ. ಕಾರ್ಬನ್ ಡೈಯಾಕ್ಸೈಡ್ ನಿಂದ ಆಗುವ ವಾಯುಮಾಲಿನ್ಯವನ್ನು ತಡೆದಂತಾಗುತ್ತದೆ ಎಂದರು.

ಅನ್ ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಅಕ್ಷಯ್ ನಾಯಕ್ ಮಾತನಾಡಿ, ನಮ್ಮ ಸಂಸ್ಥೆಯಿಂದ ತಾಂತ್ರಿಕವಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು, ನಮ್ಮದೇ ಆದ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಿದ್ದು, ಡಿ ಸ್ಕ್ರೈಬ್ ಪೇಪರ್ ಲೆಸ್ ಐಪಿಡಿ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ಸರ್ಜಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಇದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಆಸ್ಪತ್ರೆಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾಗದ ಮುಕ್ತದಿಂದ ಆಗುವ ಪ್ರಯೋಜನಗಳು
1) 1 ಮರಕ್ಕೆ 1 ವರ್ಷಕ್ಕೆ 10 ಜನಕ್ಕೆ ಆಕ್ಸಿಸನ್ ನೀಡುತ್ತದೆ. ಸರ್ಜಿ ಆಸ್ಪತ್ರೆಯಲ್ಲಿ ಕಾಗದ ಮುಕ್ತ ಮಾಡಿರುವುದರಿಂದ 1 ವರ್ಷಕ್ಕೆ 250 ಮರಗಳನ್ನು ಉಳಿಸಿದಂತಾಗುತ್ತದೆ, ಹಾಗೆಯೇ 2500 ಜನಕ್ಕೆ ಆಕ್ಸಿಸನ್ ಒದಗಿಸಿದಂತಾಗುತ್ತದೆ.

2) ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂ ಆರ್ ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗಿದೆ.

3) ಇದರಿಂದ ಶುಶ್ರೂಷಕಿಯರು ಹೆಚ್ಚಿನ ಸಮಯವನ್ನು ರೋಗಿಗಳ ಆರೈಕೆಗೆ ಮೀಸಲಿಡಲು ಸಾಧ್ಯವಾಗಿದ್ದು, ಅನಗತ್ಯ ಅಲೆದಾಟವನ್ನು ತಡೆಯಲಾಗಿದೆ.

4) ಏಕ ಕಾಲದಲ್ಲಿ 4 ರಿಂದ 5 ಜನ ವಿವರಗಳನ್ನು ದಾಖಲಿಸಬಹುದು ಹಾಗೂ ವೀಕ್ಷಣೆ ಮಾಡಬಹುದು.

5) ರೋಗಿಯ ಡಿಸ್ಚಾರ್ಜ್ ವೇಳೆ ಬಿಲ್ಲಿಂಗ್ ವಿಭಾಗ ಅಥವಾ ಲ್ಯಾಬ್ ನಲ್ಲಿ ಯಾವುದಾದರೂ ಬಾಕಿ ಇರುವುದನ್ನು ಗಮನಿಸಬೇಕಾಗಿರುತ್ತದೆ, ಇಲ್ಲವೇ ಡಿಸ್ಚಾರ್ಜ್ ಸಮ್ಮರಿಯನ್ನೂ ನೋಡಬೇಕಾಗಿರುತ್ತದೆ.

6) ಇನ್ನು ದಾದಿಯರೂ ಕೂಡ ಏನಾದರೂ ಲೋಪದೋಷಗಳಿದ್ದರೆ ನೋಡಬೇಕಾಗಿರುತ್ತದೆ, ಇವೆಲ್ಲವನ್ನೂ ಒಂದೇ ಫೈಲ್ ನಲ್ಲಿ ಬರೆಯುತ್ತಾ ಇದ್ದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಹಾಗಾಗಿ ಈ ಎಲ್ಲ ಕಾರ್ಯಗಳು ಏಕಕಾಲದಲ್ಲಿ ಪೂರ್ಣಗೊಳ್ಳುವುದರಿಂದ ರೋಗಿಯನ್ನು ಕಾಯಿಸದೇ ಡಿಸ್ಚಾರ್ಜ್ ಮಾಡಿ ಬಹುಬೇಗ ಕಳಿಸಬಹುದು.
Kalahamsa Infotech private limited 7) ನರ್ಸಿಂಗ್ ಸಿಬ್ಬಂದಿ ಹಾಗೂ ಡ್ಯೂಟಿ ಡಾಕ್ಟರ್ಸ್ ನೋಟ್ ಮಾಡಿದ ವಿವರಗಳನ್ನು ತಜ್ಞ ವೈದ್ಯರು ಮನೆಯಲ್ಲಿದ್ದುಕೊಂಡೇ ತಪ್ಪುಗಳನ್ನು ಸರಿಪಡಿಸಬಹುದು. ಇನ್ನು ಔಷಧಗಳಿಗೆ ಸಂಬಂಧಪಟ್ಟಂತೆ ಆಗಲಿ, ಪ್ರಯೋಗಾಲಯಕ್ಕೆ ಸಂಬಂಧಪಟ್ಟಿದ್ದೇ ಆಗಲಿ, ಹೆಸರು ಯಾರದ್ದೋ ಆಗಿ, ಲ್ಯಾಬ್ ಫಲಿತಾಂಶ ಬೇರೆಯವರದ್ದಾಗಿ ಆಗುವ ಪ್ರಮಾದವನ್ನು ತಪ್ಪಿಸಬಹುದು. ಅಲ್ಲದೇ ಆಯಾ ರೋಗಿಗೆ ಸಲ್ಲಬೇಕಾದ ಮೆಡಿಸಿನ್ , ಚಿಕಿತ್ಸಾ ಪರೀಕ್ಷೆಗಳು ನಿಖರವಾಗಿ ತಲುಪುತ್ತದೆ. ಡಿಜಿಟಲೀಕರಣದಿಂದಾಗಿ ಅಜಾಗರೂಕತೆ ಇಲ್ಲವೇ ಕಣ್ತಪ್ಪಿನಿಂದಾಗುವ ತಪ್ಪುಗಳನ್ನು ತಡೆಯಬಹುದು. (ಉದಾ: ರೋಗಿಯ ಹೆಸರಿಗೆ ಬೇರೆಯವರ ರಿಪೋರ್ಟ್ ಅದಲು ಬದಲಾಗುವುದು).

8) ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ.

9) ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಬಂಧಿಸಿದ ಸುಮಾರು 30- 40 ಪುಟಗಳ ಕಡತಗಳನ್ನು ಮೂರು ವರ್ಷ ಕಡ್ಡಾಯವಾಗಿಡಬೇಕೆಂಬ ನಿಯಮವಿದೆ, ಅಷ್ಟು ವರ್ಷಗಳ ಕಾಲ ಕೊಠಡಿಯಲ್ಲಿಟ್ಟಾಗ ಇಲಿಗಳಿಂದ, ಇಲ್ಲವೇ ನೀರಿನಿಂದ ಅಥವಾ ಬೆಂಕಿ ಅವಘಡದಿಂಧ ಸುಟ್ಟು ಹೋಗಬಹುದಾದ ಸಾಧ್ಯತೆ ಇತ್ತು, ಇದೀಗ ಎಲ್ಲ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸ್ಟೋರೇಜ್ ಮಾಡಿಡಬಹುದು, ಒಂದು ವೇಳೆ ಫೈಲ್ ಗಳಾಗಿದ್ದರೆ ಕಳವು ಆಗುವ ಸಾಧ್ಯತೆಯೂ ಇರುತ್ತಿತ್ತು, ಈಗ ಯಾವುದೇ ತೊಂದರೆಗಳು ಆಗುವುದಿಲ್ಲ, ಡೇಟಾ ಸಂರಕ್ಷಣೆ ಮಾಡಿಡಲಾಗುತ್ತದೆ.

ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿಯಾದ ನಮಿತಾ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಎಸ್.ವೀರಯ್ಯ, ವೈದ್ಯಕೀಯ ಅಧೀಕ್ಷಕರಾದ ಡಾ.ವಿಜಯ ಕುಮಾರ ಮಾಯೇರ, ಅನ್ ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಅಕ್ಷಯ್ ನಾಯಕ್, ಬಿ.ಎಸ್.ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4
Tags: Digital AdministrationHospital NewsKannada News WebsiteLatest News KannadaLocal NewsMalnad NewsPaperless AdministrationSarji HospitalShimogaShivamoggaShivamogga Newsಆನ್ ಲೈನ್ಕಾಗದ ರಹಿತಡಾ. ಧನಂಜಯ ಸರ್ಜಿಡಿಜಿಟಲ್ಪೇಪರ್ಪೇಪರ್ ಲೆಸ್ ಆಸ್ಪತ್ರೆಭಾರತಶಿವಮೊಗ್ಗಸರ್ಜಿ ಆಸ್ಪತ್ರೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

The ‘Real Heroes Of India’ Who Provide Healthcare To India’s Remote Islands

Next Post

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಮುಡಿ ಕೊಟ್ಟ ಶಿವರಾಜಕುಮಾರ್ ದಂಪತಿ | ಹೇಗಿದ್ದಾರೆ ನೋಡಿ ಶಿವಣ್ಣ

kalpa News

kalpa News

Next Post
ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಮುಡಿ ಕೊಟ್ಟ ಶಿವರಾಜಕುಮಾರ್ ದಂಪತಿ | ಹೇಗಿದ್ದಾರೆ ನೋಡಿ ಶಿವಣ್ಣ

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಮುಡಿ ಕೊಟ್ಟ ಶಿವರಾಜಕುಮಾರ್ ದಂಪತಿ | ಹೇಗಿದ್ದಾರೆ ನೋಡಿ ಶಿವಣ್ಣ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL