ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತುಉಕ್ಕು ಕಾರ್ಖಾನೆಗೆ ಕಾಯಕಲ್ಪ ನೀಡುವ ವಿಚಾರದಲ್ಲಿ ನಾನೇನು ಸುಮ್ಮನೆ ಕೂತಿಲ್ಲ. ಇದಕ್ಕೆ ಅಗತ್ಯವಿರುವ ಹಣ ಹೂಡಲು ಪ್ರಧಾನಿ ಹಾಗೂ ಹಣಕಾಸು ಸಚಿವರ ಒಪ್ಪಿಗೆ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಹೇಳಿದರು.
ಈ ಕುರಿತಂತೆ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ #VISL ಕಾಯಕಲ್ಪ ನೀಡಿ ಅದಕ್ಕೆ ಮರುಜೀವ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ಪ್ರಧಾನಿಗಳು, ಹಣಕಾಸು ಸಚಿವರ ಒಪ್ಪಿಗೆ ಬೇಕಿದೆ. ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಹತ್ತು ಸಾವಿರ ಕೋಟಿ ಹಣ ಬೇಕು. ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ನಾನೇನು ಸುಮ್ಮನೆ ಕೂತಿಲ್ಲ. ಉದ್ಯೋಗ ಸೃಷ್ಟಿ ಆಗಬೇಕು ಎನ್ನುವುದು ನನ್ನ ಉದ್ದೇಶ ಎಂದರು.
ಶೀಘ್ರ ಶುಭ ಸುದ್ದಿ ನೀಡುತ್ತೇನೆ
ಪ್ರಧಾನಿಗಳ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು? ಯಾವಾಗ? ಎಂದು ಈಗಲೇ ಹೇಳಲಾರೆ. ಅದು ಯಶಸ್ವಿ ಆದರೆ ಪ್ರಧಾನಿಗಳಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ ಹಂತವಾಗಿ ಸರಿ ಹೋಗುತ್ತವೆ. ಆ ಪ್ರಯತ್ನ ದಲ್ಲಿ ನಾನು ಇದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ಹೇಳಲಿದ್ದೇನೆ ಎಂದು ಸಚಿವರು ಹೇಳಿದರು.
ಆದರೆ, ಆ ಶುಭ ಸುದ್ದಿ ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಅವರು ಬಹಿರಂಗ ಮಾಡಲಿಲ್ಲ.
ಕುದುರೆಮುಖ ಕಂಪನಿ ಯೋಜನೆಗೂ ಅಡ್ಡಿ
ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ಕಾಯಕಲ್ಪ ನೀಡಲು ದೇವದಾರಿ ಗಣಿಗಾರಿಕೆ ಯೋಜನೆಗೆ ಆರ್ಥಿಕ ನೆರವು ನೀಡುವ ಕಡತಕ್ಕೆ ಸಹಿ ಹಾಕಿದೆ. ಆ ಕಡತವನ್ನು ಹಣಕಾಸು ಇಲಾಖೆಗೆ ಕಲಿಸುವುದಕ್ಕೆ ಮಾತ್ರ ನಾನು ಒಪ್ಪಿಗೆ ಕೊಟ್ಟೆ. ಆದರೆ, ಕುಮಾರಸ್ವಾಮಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ಕೊಟ್ಟು ಅರಣ್ಯ ನಾಶಕ್ಕೆ ಕಾರಣ ಆಗುತ್ತಿz್ದÁರೆ ಎಂದು ರಾಜ್ಯ ಮತ್ತು ಇನ್ನೂ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸಿದರು.
Also read: ಸೊರಬ | ಹಲವು ಕಚೇರಿ, ಬ್ಯಾಂಕ್’ಗಳಲ್ಲಿ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ
ಈ ಬಗ್ಗೆ ರಾಜ್ಯ ಸರಕಾರದಿಂದಲೇ ಗೊಂದಲ ಮೂಡಿಸುವ ಪ್ರಯತ್ನ ನಡೆಯಿತು. 1,738 ಕೋಟಿಗೆ ಆರ್ಥಿಕ ಗ್ಯಾರಂಟಿ ಕೊಡುವ ಕಡತಕ್ಕೆ ನಾನು ಸಹಿ ಹಾಕಿದ್ದು. ಕುದುರೆಮುಖ ಕಂಪನಿಯಲ್ಲಿ ಸಾವಿರಾರು ಉದ್ಯೋಗಿಗಳಿದ್ದು, ತೊಂದರೆಗೆ ಸಿಲುಕಲಿದ್ದಾರೆ. ಹಾಗಾದರೆ, ರಾಜ್ಯ ಅಭಿವೃದ್ಧಿ ಆಗುವುದು ಹೇಗೆ? ರಾಜ್ಯ ಸರಕಾರವೇ ಅಡ್ಡಿ ಉಂಟು ಮಾಡಿದರೆ ಹೇಗೆ? ಇದು ಯಾವ ರೀತಿಯ ನಡೆ ಎಂದು ಕುಮಾರಸ್ವಾಮಿ ಅವರು ತೀಕ್ಷö್ಣವಾಗಿ ಪ್ರಶ್ನಿಸಿದರು.
ಬಳ್ಳಾರಿಯ ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಸಿದ್ದರಾಮಯ್ಯನವರೇ ಸಿಎಂ ಆಗಿದ್ದ ವೇಳೆಯೇ ದೇವದಾರಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅವರೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದಕ್ಕೆ ಕೇಂದ್ರದ ಪರಿಸರ ಇಲಾಖೆಯ ಅನುಮತಿಯೂ ಸಿಕ್ಕಿದೆ. ಇದೆಲ್ಲ ಆದ ಮೇಲೆಯೇ ನಾನು ನಾನು ಹಣಕಾಸು ಗ್ಯಾರಂಟಿ ಕಡತಕ್ಕೆ ಸಹಿ ಹಾಕಿದೆ.
ಅರಣ್ಯೀಕರಣಕ್ಕೆ 190 ಕೋಟಿ ಹಾಗೂ 500 ಕೋಟಿಗಳನ್ನು ರಾಜ್ಯ ಸರ್ಕಾರಕ್ಕೆ ಕುದುರೆಮುಖ ಕಂಪನಿ ಪಾವತಿಸಿದೆ. ಅನುಮತಿ ಕೊಡಲು ಆಗದಿದ್ದರೆ ಸರಕಾರ ಹಣ ಕಟ್ಟಿಸಿಕೊಂಡಿದ್ದು ಯಾಕೆ? ಅನುಮತಿ ಕೊಟ್ಟಿದ್ದೂ ಅವರೇ, ಈಗ ಗೊಂದಲ ಮೂಡಿಸುತ್ತಿರುವುದು ಕೂಡ ಅವರೇ. ಇದು ರಾಜ್ಯ ಸರಕಾರದ ಇಬ್ಬಗೆಯ ನೀತಿ ಅಲ್ಲವೇ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post