ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟನೆಯಿಂದ ದೂರ ಉಳಿದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದ ಇರುವ ಸ್ಯಾಂಡಲ್‌ವುಡ್ Sandalwood ಬೆಡಗಿ ರಾಧಿಕಾ ಪಂಡಿತ್ Radhika Pandit ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಚೆಂದದ ಫ್ಯಾಮಿಲಿ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು… ಸಾಮಾಜಿಕ ಜಾಲತಾಣಲ್ಲಿ ತಮ್ಮ 500ನೇ ಪೋಸ್ಟ್‌ಗಾಗಿ ಈ ವಿಶೇಷ ಫ್ಯಾಮಿಲಿ ಫೋಟೋವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮೊಗ್ಗಿನಮನಸ್ಸು ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾಪಂಡಿತ್ ಮದುವೆಯ ಬಳಿಕವೂ ಬೆಳ್ಳಿತೆರೆ ಮೇಲೆ ರಾರಾಜಿಸಿದ್ದರು. ಮತ್ತೆ ರಾಧಿಕಾ ಕಂಬ್ಯಾಕ್‌ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದು, ಆದಿ ಲಕ್ಷ್ಮಿ ಪುರಾಣ ನಟನೆಯ ಕೊನೆಯ ಸಿನಿಮಾವಾಗಿದೆ. ತಮ್ಮ ವೈಯಕ್ತಿಕ ಬದುಕಿನ ಸುಂದರ ಫೋಟೋಗಳನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ.
Also read: ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು: ಕಚ್ಚಾತೈಲ ಬೆಲೆ ಕುಸಿತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post