ಕಲ್ಪ ಮೀಡಿಯಾ ಹೌಸ್ | ದುಬೈ |
ಪ್ರಪಂಚದಾದ್ಯಂತ ಹಣದುಬ್ಬರ ಸಮಸ್ಯೆ ಎದುರಾಗುತ್ತಿದ್ದು, ಕಚ್ಚಾತೈಲದ ಬೆಲೆಯೂ Crude Oil Price ಕುಸಿತವಾಗಿದೆ. 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 100 ಡಾಲರ್ (7,900 ರೂ.) ಗಿಂತಲೂ ಕಡಿಮೆಯಾಗಿದೆ ಎನ್ನಲಾಗಿದೆ.
1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 94 ಸೆಂಟ್ ಅಥವಾ ಶೇ.0.9 ರಷ್ಟು ಕುಸಿದು 99.75 ಡಾಲರ್ ತಲುಪಿದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೆಟ್ ಕಚ್ಚಾ ತೈಲದ ಬೆಲೆ ಶೇ.9ರಷ್ಟು ಕುಸಿದು 97.91 ಡಾಲರ್ (7,700 ರೂ.) ತಲುಪಿದೆ.
1988ರಲ್ಲಿ ವ್ಯಾಪಾರ ಪ್ರಾರಂಭವಾದಾಗಿನಿಂದ ಕಂಡ 3ನೇ ಅತಿ ದೊಡ್ಡ ಕುಸಿತ ಇದಾಗಿದ್ದು, ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ತೈಲ ಬೆಲೆ ಭಾರೀ ಕುಸಿತ ಕಂಡಿದೆ. ಆರ್‌ಬಿಐ ಸೇರಿದಂತೆ ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಲೋಹ, ತಾಳೆ ಎಣ್ಣೆ, ಇತರ ಸರಕುಗಳ ಬೆಲೆಯೂ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post