ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೈಲ್ವೆ ಮಂಡಳಿಯು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ–ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ (06261/06262) ವಿಶೇಷ ಎಕ್ಸ್ ಪ್ರೆಸ್ ರೈಲುಗಳ #Bangalore Special Express Train ಸಂಚಾರದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಮೂಲಕ ಪ್ರತಿ ದಿಕ್ಕಿನಲ್ಲಿ ಒಟ್ಟು ಆರು ಹೆಚ್ಚುವರಿ ಟ್ರಿಪ್’ಗಳನ್ನು ಓಡಿಸಲು ಅವಕಾಶ ಕಲ್ಪಿಸಲಾಗಿದೆ.
ರೈಲು ಸಂಖ್ಯೆ 06261 ಯಶವಂತಪುರ–ಮುಜಫ್ಫರಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈ ಹಿಂದೆ ಅಕ್ಟೋಬರ್ 22, 2025 ರವರೆಗೆ ಸಂಚರಿಸಲು ನಿಗದಿಯಾಗಿತ್ತು. ಇದೀಗ ಇದರ ಅವಧಿಯನ್ನು ಅಕ್ಟೋಬರ್ 29 ರಿಂದ ನವೆಂಬರ್ 26, 2025 ರವರೆಗೆ (ಬುಧವಾರ) ವಿಸ್ತರಿಸಲಾಗಿದೆ.

ಈ ವಿಶೇಷ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ನಿಲುಗಡೆಗಳು, ಬೋಗಿಗಳ ಸಂಯೋಜನೆ ಮತ್ತು ಸಮಯಗಳೊಂದಿಗೆ ಸಂಚರಿಸುತ್ತವೆ. ಆದರೆ, ರೈಲು ಸಂಖ್ಯೆ 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ ರೈಲು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಆಗಮಿಸುವ ಸಮಯದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು 06262 ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಈ ಹಿಂದೆ ನಿಗದಿಯಾಗಿದ್ದ ಬೆಳಿಗ್ಗೆ 06:30ರ ಬದಲು, ಈಗ ಬೆಳಿಗ್ಗೆ 07:30ಕ್ಕೆ ಆಗಮಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post