ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನಗರದ ಪ್ರಖ್ಯಾತ ಸಂಸ್ಥೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಜುಲೈ 20ರ ಭಾನುವಾರದಂದು ಗುರುಪೂರ್ಣಿಮೆ #Guru Poornima ಉತ್ಸವದ ಅಂಗವಾಗಿ ‘ಶ್ರೀ ಗುರುಪೂರ್ಣಿಮಾರ್ಚನಮ್’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೆಂಗಳೂರು ಮಹಾನಗರದ ಹನುಮಂತ ನಗರ ( ಬನಶಂಕರಿ 1ನೇ ಹಂತ)ದ ಪಿಇಎಸ್ ಪದವಿ ಕಾಲೇಜು ಹಿಂಭಾಗದ ಸ್ವಾಮಿ ವಿವೇಕಾನಂದ ವಿದ್ಯಾಶಾಲೆ ಸಭಾಂಗಣದಲ್ಲಿ ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ 12.30ರವರೆಗೆ ಶ್ರೀ ಗುರುಪೂರ್ಣಿಮಾರ್ಚನಮ್- ಕೃತಿಯಲ್ಲಿ ಇರುವ ಸ್ತೋತ್ರ ಮತ್ತು ಅಷ್ಟೋತ್ತರ ಪಠಣಗಳಿಂದ
ಶ್ರೀ ವೇದವ್ಯಾಸ ದೇವರಿಗೆ ಪುಷ್ಪಾರ್ಚನೆ ನೆರವೇರಲಿದೆ.
ಸಂಜೆ 3.30ರಿಂದ 5 ರ ವರೆಗೆ ವಿದ್ಯಾಲಯದ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ ಸ್ತೋತ್ರ ಮತ್ತು ಭಜನ್ಸ್ ಗಾಯನ ನೆರವೇರಲಿದೆ. ಅಂದು ಸಂಜೆ 5 ರಿಂದ 7.30ರವರೆಗೆ ಸಭಾ ಕಾರ್ಯಕ್ರಮವಿದೆ. ಪ್ರಖ್ಯಾತ ಜ್ಯೋತಿಷ್ಯರು ಮತ್ತು ಕನ್ನಡ ನಾಡಿನ ನಂಬರ್ 1 ಪತ್ರಿಕೆ ವಿಜಯವಾಣಿ ಅಂಕಣಕಾರರಾದ ಶ್ರೀ ರಾಜಗುರು ಬಿ.ಎಸ್. ದ್ವಾರಕಾನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಗುರುಪೂರ್ಣಿಮೆ ಉತ್ಸವದ ಸಂದರ್ಭ ನಾಡಿನ ಇಬ್ಬರು ಸಾಧಕರ ಜೀವಮಾನದ ಸಾಧನೆ ಪರಿಗಣಿಸಿ ಪ್ರಶಸ್ತಿ, ಫಲಕ ಸಹಿತ ಗೌರವಿಸಲಾಗುವುದು. ಹಿರಿಯ ವಿದ್ವಾಂಸರೂ ಆಗಿರುವ ಬಿಳಿಗಿರಿ ರಂಗನಾಥ ವೇದಪಾಠ ಶಾಲೆಯ ವೇದಬ್ರಹ್ಮ ನಾಗರಾಜ ಶ್ರೌತಿ ಅವರಿಗೆ ‘ ಅಧ್ಯಾತ್ಮನುಗ್ರಹಶ್ರೀ’ ಮತ್ತು ವಿಜಯವಾಣಿ ಕನ್ನಡ ದಿನಪತ್ರಿಕೆ ಸೀನಿಯರ್ ಡೆಪ್ಯೂಟಿ ಎಡಿಟರ್ ಮತ್ತು ಸವ್ಯಸಾಚಿ – ಎಂಬ ಜನಪ್ರಿಯ ಅಂಕಣಕಾರರಾಗಿರುವ ಶ್ರೀ ರಾಘವೇಂದ್ರ ಗಣಪತಿ ಅವರಿಗೆ ‘ ಸಾಹಿತ್ಯನುಗ್ರಹಶ್ರೀ’ ಪ್ರಶಸ್ತಿ ನೀಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಹಿರಿಯ ಉಪನ್ಯಾಸಕ, ಖ್ಯಾತ ವಾಗ್ಮಿ ಮತ್ತು ಸಂಸ್ಕೃತ ವಿದ್ವಾಂಸ ಡಾ.ಮತ್ತೂರು ಸನತ್ ಕುಮಾರ್ ಹಾಗೂ ಸ್ವಾಮಿ ವಿವೇಕಾನಂದ ಶೈಕ್ಷಣಿಕ ವಿದ್ಯಾಸಂಸ್ಥೆ ಕಾರ್ಯದರ್ಶಿಗಳಾದ ಶ್ರೀ ಎಚ್.ವಿ. ಶಂಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 7.30ಕ್ಕೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಗುವುದು. ಕಲಾಭಿಮಾನಿಗಳು, ಕಲಾ ಆಸಕ್ತರು ಆಗಮಿಸಬೇಖು ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ .ಎಸ್. ಶ್ರೀಕಂಠ ಭಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಶೇಷ ಸೂಚನೆ:
ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಹೆಮ್ಮೆಯ ಪ್ರಕಟಣೆಗಳಾದ ‘ ಶ್ರೀ ಗುರುಪೂರ್ಣಿಮಾರ್ಚನಮ್’
ಸ್ಮೃತಿ ಶಂಕರಃ ಮತ್ತು ದೇವರನಾಮಗಳ ಪುಸ್ತಕಗಳು ಕಾರ್ಯಕ್ರಮ ಸ್ಥಳದಲ್ಲಿ ಲಭ್ಯವಾಗಲಿವೆ ಎಂದು ಶ್ರೀಕಂಠಭಟ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post