ಕಲ್ಪ ಮೀಡಿಯಾ ಹೌಸ್ | ಬಾಯಾರು |
ಕರಾವಳಿ ಕರ್ನಾಟಕದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿದ ಕಿರುಚಿತ್ರ ಅಲ್ಟಿ ಮೆಟ್ ರೀಲ್ಸ್ ಕಿರುಚಿತ್ರಕ್ಕೆ #Ultimate Reels Short Movie ಪ್ರೇಕ್ಷಕರಿಂದ ಉತ್ತಮ ವಾದ ಪ್ರಶಂಸೆ ದೊರಕಿದೆ. ಪ್ರಸ್ತುತ ಸಮಾಜದಲ್ಲಿನಡೆಯುತ್ತಿರುವಂತಹ, ಆಗು ಹೋಗುಗಳ
ವಿಷಯವನ್ನಾಧರಿಸಿದ ಕಿರುಜಿತ್ರ ಇದಾಗಿದ್ದು ಅಭಿನಯಿಸಿದ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ, ಪ್ರೇಕ್ಷಕರಿಂದ ಉತ್ತಮವಾದ ಅಭಿಪ್ರಾಯವಿದೆ.ಬೆಳಗಾವಿ ಜಿಲ್ಲೆಯ ಮಾಡಲಗಿ ತಾಲೂಕಿನ ಯುವ ಪ್ರತಿಭೆಗಳ ಅಭಿಮಾನಿ ಸಂಘವೊಂದು ಈ ಕಿರುಚಿತ್ರವನ್ನ ಅಭಿಮಾನದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕಿರುಚಿತ್ರದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ತಾಂತ್ರಿಕ ವರ್ಗದಲ್ಲಿ ಕಥೆ ತುಕಾರಾಮ ಬಾಯಾರು, ಕ್ಯಾಮರಾ ನಾಗೇಶ್ ಆಚಾರ್ಯ ಮೂಡುಬೆಳ್ಳೆ, ನಿರ್ಮಾಣ ಶಶಿಕಾಂತ.ವಿ.ಆಚಾರ್ಯ ಎಡ್ಮೇರು.ತಾರಾಗಣದಲ್ಲಿ ಶಶಿಕಾಂತ್.ವಿ. ಆಚಾರ್ಯ, ತುಕಾರಾಂ ಬಾಯಾರು, ಶ್ರೀನಿಧಿ ಹೆಗಡೆ ಉಡುಪಿ, ಪ್ರಭಾಕರ್ ಆಚಾರ್ಯ, ಜಗದೀಶ್, ರಕ್ಷಿತ್ ವಂಡ್ಸೆ ಅಭಿನಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















