No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Monday, October 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಪ್ರಾಣಿಗಳಿಂದ ಬರುವ ಸಾಂಕ್ರಾಮಿಕ ರೋಗದ ಬಗ್ಗೆ ಜಾಗ್ರತೆ ವಹಿಸಿ: ಡಿಎಚ್‌ಒ ಸಲಹೆ

kalpa News by kalpa News
March 18, 2019
in ಶಿವಮೊಗ್ಗ
0
ಪ್ರಾಣಿಗಳಿಂದ ಬರುವ ಸಾಂಕ್ರಾಮಿಕ ರೋಗದ ಬಗ್ಗೆ ಜಾಗ್ರತೆ ವಹಿಸಿ: ಡಿಎಚ್‌ಒ ಸಲಹೆ
Share on FacebookShare on TwitterShare on WhatsApp

ಶಿವಮೊಗ್ಗ: ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಈ ಕಾಲದಲ್ಲಿ ಪ್ರಾಣಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು ಅತ್ಯಂತ ಅಪಾಯಕಾರಿಯಾಗಿದ್ದು, ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಸಲಹೆ ನೀಡಿದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಝೋನೋಟಿಕ್ ರೋಗ, ಅದರ ಪರಿಣಾಮ ಹಾಗೂ ನಿಯಂತ್ರಣದ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಝೊನೋಟಿಕ್ ಎಂದರೇನು?
ಝೊನೋಟಿಕ್ ಎಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಹಕ್ಕಿ ಜ್ಚರ, ಡೆಂಗ್ಯೂ, ಎಚ್1 ಎನ್1, ರೇಬಿಸ್ ಇವುಗಳು ಝೊನಾಸಿಸ್ ಕಾಯಿಲೆಗಳಾಗಿವೆ. ಒಮ್ಮೆ ಒಬ್ಬ ಮನುಷ್ಯನಿಗೆ ಈ ರೋಗ ಬಂದರೆ ಅದು ಮನುಷ್ಯರಿಂದ ಮನುಷ್ಯರಿಗೆ ಗಾಳಿಯ ಮೂಲಕ ಹಾಗೂ ಇನ್ನಿತರೆ ಮಾರ್ಗಗಳ ಮೂಲಕ ಹರಡುತ್ತಾ ಹೋಗುತ್ತದೆ. ಮನೆಯಲ್ಲಿ ಸಾಕುವ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಹಸು ಇವುಗಳ ಮೂಲಕವೂ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಎಂದರು.

ರೋಗದ ಲಕ್ಷಣಗಳಿವು:
ಬಿಟ್ಟು ಬಿಟ್ಟು ಚಳಿ ಜ್ಚರ, ಆಯಾಸ, ದೇಹ ನಿಶ್ಯಕ್ತಿಗೊಳ್ಳುವುದು, ಕೀಲು ನೋವು, ಗಂಟಲು ಉರಿ ಊತ, ವಾಂತಿ, ಬೇದಿ ಮೊದಲಾದವು ಇದರ ಪ್ರಮುಖ ಲಕ್ಷಣಗಳಾಗಿದೆ.

ಝೊನೋಟಿಕ್ ರೋಗಗಳು ಇಂದು ಮನುಷ್ಯನನ್ನು ಇನ್ನಿಲ್ಲದ ರೀತಿಯಲ್ಲಿ ಕಾಡುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಪ್ರತಿವರ್ಷ ಲಕ್ಷಾಂತರ ಮಂದಿ ಈ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.

ಮುನ್ನೆಚ್ಚರಿಕೆ ಕ್ರಮಗಳಿವು:
ಝೊನೋಟಿಕ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಮ್ಮ ಕೈಕಾಲುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಉತ್ತಮ. ಹಳದಿ ಬಣ್ಣದ ಮೂತ್ರ ಹೋಗುವುದು ಕಂಡು ಬಂದಲ್ಲಿ ತತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದಷ್ಟು ಶುದ್ದ ನೀರನ್ನು ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದರು.

ಇಂದು ಝೊನೋಟಿಕ್ ಕಾಯಿಲೆಗಳಲ್ಲೇ ಒಂದಾದ ಕೆಎಫ್‌ಡಿ ಕಾಯಿಲೆಯೂ ತನ್ನ ಕರಾಳತೆಯನ್ನು ತೋರಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದ ಕೆಎಫ್‌ಡಿ ಕಾಯಿಲೆಯು ಇಂದು ಮಾರಕವಾಗಿ ಪರಿಣಮಿಸಿದ್ದು ಸಾರ್ವಜನಿಕ ವಲಯದಲ್ಲಿ ಭಯವನ್ನುಂಟುಮಾಡುತ್ತಿದೆ. ಆದರೆ ಇದರ ಬಗ್ಗೆ ಆತಂಕ ಬೇಡ. ಸೂಕ್ತ ರೋಗಬಾರದಂತೆ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಿದರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದರು.

ಕೆಎಫ್’ಡಿ ಮಂಗನ ಕಾಯಿಲೆಯಲ್ಲ!
ಕೆಎಫ್‌ಡಿ ಎಂದರೆ ಮಂಗನಿಂದ ಬರುವ ಕಾಯಿಲೆ ಎಂದು ಕೆಲವರು ತಪ್ಪಾಗಿ ತಿಳಿದಿದ್ದು ಈ ಕಾಯಿಲೆಯು ಕಾಡಿನಲ್ಲಿರುವ ಉಣ್ಣೆಯಿಂದ ಬರುತ್ತದೆ. ಹಾಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್‌ ಡಿಸೀಸ್ ಎನ್ನುತ್ತಾರೆ.

1957ರಲ್ಲಿ ಶಿವಮೊಗ್ಗದ ಸೊರಬ ತಾಲೂಕಿನ ಕ್ಯಾಸನೂರು ಎಂಬ ಗ್ರಾಮದಲ್ಲಿ ಮೊದಲಿಗೆ ಈ ಕಾಯಿಲೆ ಕಂಡು ಬಂದಿತು. ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರ ಮೇಲಿರುವ ಉಣ್ಣೆಗಳು ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುತ್ತದೆ. ಆದುದರಿಂದ ಈ ಕಾಯಿಲೆಗೆ ಮಂಗನ ಕಾಯಿಲೆ ಎನ್ನುತ್ತಾರೆ ಹೊರತು ಇದು ಮಂಗನಿಂದ ಬರುವ ರೋಗವಲ್ಲ. ಮಂಗಗಳು ಸಾಯುವುದು ಈ ರೋಗ ಹರಡುವಿಕೆಯ ಮುನ್ಸೂಚನೆಯಾಗಿರುತ್ತದೆ ಎಂದರು.

ಪ್ರಪಂಚದಲ್ಲೇ ಕೇವಲ ಶಿವಮೊಗ್ಗದ ಕ್ಯಾಸನೋರಿನಲ್ಲಿ ಈ ಕಾಯಿಲೆ ಕಂಡುಬಂದಿರುವುದರಿಂದ ಇದನ್ನು ಕ್ಯಾಸನೂರು ಫಾರೆಸ್ಟ್‌ ಡಿಸೀಸ್ ಎನ್ನುತ್ತಾರೆ. ಕ್ರಮೇಣ ಈ ಕಾಯಿಲೆ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹಲವು ಕಡೆ ಕಂಡುಬಂದಿತು ಎಂದರು.

ಕೆಎಫ್’ಡಿ ವಿಚಾರದ ಮುನ್ನೆಚ್ಚರಿಕೆಗಳಿವು:
ನವೆಂಬರ್ ತಿಂಗಳಲಿನಲ್ಲಿ ಕೆಎಫ್‌ಡಿ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಕಾಡಿಗೆ ಹೋಗುವಾಗ ಮೈತುಂಬ ಬಟ್ಟೆ ಧರಿಸಿ ಹೋಗುವುದು ಉತ್ತಮ. ಕಾಡಿನಲ್ಲಿ ಚಾರಣ ಮಾಡುವವರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವುದು ಅವಶ್ಯಕ ಎಂದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ಕೆಲವು ವರ್ಷಗಳ ಹಿಂದೆ ನಮಗೆ ಪ್ರಾಣಿಗಳಿಂದ ಹರಡುವ ರೋಗಗಳ ಪ್ರಮಾಣ ಬಹಳ ಕಡಿಮೆ ಇತ್ತು. ಆದರೆ ಇಂದು ಕೆಎಫ್‌ಡಿ, ಚಿಕೂನ್‌ಗುನ್ಯದಂತಹ ಝೋನೋಟಿಕ್ ಕಾಯಿಲೆಗಳು ಉಲ್ಬಣಿಸಿ ಮನುಷ್ಯನಿಗೆ ಭಾದೆ ನೀಡುತ್ತಿದೆ. ಇಂತಹ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಈ ಕಾಯಿಲೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಅವಶ್ಯಕತೆಯಿದೆ ಎಂದರು.

ಕಾರ್ಯಾಗಾರದಲ್ಲಿ ತೀರ್ಥಹಳ್ಳಿ ಟಿಎಚ್‌ಓ ಡಾ.ಕಿರಣ್ ಕೆಎಫ್‌ಡಿ ನಿಯಂತ್ರಣದ ಬಗ್ಗೆ ಮಾತನಾಡಿದರು. ಡಾ.ಬಿ. ಶ್ರೀನಿವಾಸ್ ಕೆಎಫ್‌ಡಿ ಚಿಕಿತ್ಸೆ ಕುರಿತು, ಡಾ.ಶ್ರೀಕಾಂತ್ ಹೆಗಡೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ಬಗ್ಗೆ ಹಾಗೂ ಡಾ.ಸಂತೋಷ್ ಸಜ್ಜನ್ ಝೋನೋಟಿಕ್ ರೋಗಗಳ ನಿಯಂತ್ರಣದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಯಾ ಶ್ರೀನಿವಾಸ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಂ.ಕಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ. ಬಿ. ಶ್ರೀನಿವಾಸ್, ಶೈಕ್ಷಣಿಕ ನಿರ್ದೇಶಕರಾದ ಡಾ.ಆರ್.ಪಿ. ಪೈ, ಐಎಂಎ ಅಧ್ಯಕ್ಷ ಡಾ. ಪಿ.ಕೆ.ಪೈ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಎಸ್. ಸುರೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಮಾಲಾ ಸತೀಶ್ ಇನ್ನಿತರರು ಉಪಸ್ಥಿತರಿದ್ದರು.

Tags: Contagious DiseasesEpidemicKannada NewsShivamoggaSubbaiah Medical CollegeZoonosisZoonotic diseasesಎಚ್1 ಎನ್1ಕೆಎಫ್‌ಡಿಝೊನೋಟಿಕ್ಶಿವಮೊಗ್ಗಸಾಂಕ್ರಾಮಿಕ ರೋಗಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯಹಕ್ಕಿ ಜ್ಚರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪೇಜಾವರ ಮಠದಿಂದ ಅರ್ಥಪೂರ್ಣ ಧಾರ್ಮಿಕ ಬೇಸಿಗೆ ಶಿಬಿರ: ನಿಮ್ಮ ಮಕ್ಕಳನ್ನು ಸೇರಿಸಲು ಮರೆಯದಿರಿ

Next Post

ಪ್ರದೋಷ ಕಾಲ ಎಂದರೇನು? ಈ ಕಾಲ ವ್ರತದ ಮಹತ್ವವೇನು?

kalpa News

kalpa News

Next Post
ಪ್ರದೋಷ ಕಾಲ ಎಂದರೇನು? ಈ ಕಾಲ ವ್ರತದ ಮಹತ್ವವೇನು?

ಪ್ರದೋಷ ಕಾಲ ಎಂದರೇನು? ಈ ಕಾಲ ವ್ರತದ ಮಹತ್ವವೇನು?

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL