ಬೆಂಗಳೂರು: ದೇಶದಾದ್ಯಂತ ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ವಿವಿಧ ರೀತಿಯ ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ರೀತಿಯ ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತದೆ. ಆದರೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗುವಂತಹ ಸಂಸ್ಕಾರ ಕೊಡುವ ಬೇಸಿಗೆ ಶಿಬಿರ ಎಲ್ಲೂ ನಡೆಯುತ್ತಿಲ್ಲ.
ಆದರೆ, ಇಂತಹ ಒಂದು ಅದ್ಬುತ ಕಾರ್ಯವನ್ನು ಸಾಕಾರ ಮಾಡುತ್ತಿದೆ ಪೇಜಾವರ ಅಧೋಕ್ಷಜ ಮಠ.
ಹೌದು… ಪೇಜಾವರ ಅಧೋಕ್ಷಜ ಮಠ ಮತ್ತು ಅಖಿಲ ಭಾರತ ಮಾಧ್ವ ಮಹಾಮಂಡಲದ ಆಶ್ರಯದಲ್ಲಿ ಧಾರ್ಮಿಕ ಶಿಕ್ಷಣ ಶಿಬಿರವನ್ನು ಆಯೋಜಿಸಿದ್ದು, ಇದು ಸಂಪೂರ್ಣ ಉಚಿತವಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್’ಗೆ ಮಾಹಿತಿ ನೀಡಿರುವ ಶ್ರೀಮಠದ ಕೃಷ್ಣರಾಜ ಕುತ್ಪಾಡಿ ಅವರು, ಉಡುಪಿ ಪೇಜಾವರ ಮಠದ ಶ್ರೀ ಶ್ರೀವಿಶ್ವೇಶತೀರ್ಥಶ್ರೀಪಾದರ ಹಲವು ಮುಖದ ಸಾಮಾಜಿಕ ಚಟುವಟಿಕೆಗಳಲ್ಲಿ ಬೇಸಿಗೆಯಲ್ಲಿ ನಡೆಯುವ ಉಚಿತ ಧಾರ್ಮಿಕ ಶಿಕ್ಷಣ ಶಿಬಿರವೂ ಒಂದು. ಪ್ರತಿವರ್ಷ ಹೊರರಾಜ್ಯಗಳೂ ಸೇರಿದಂತೆ ಸುಮಾರು 50 ಕಡೆಗಳಲ್ಲಿ ಶಿಬಿರಗಳು ನಡೆಯುತ್ತಿವೆ. ಈ ಬಾರಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಈ ಶಿಬಿರನ್ನು ಏಕಕಾಲದಲ್ಲಿ ನಡೆಸುವಂತೆ ಆದೇಶಿಸಿದ್ದಾರೆ. ಅದರಂತೆ ಈ ಕೆಳಗಿನ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದಿದ್ದಾರೆ.
ಶಿಬಿರದ ಕುರಿತಾಗಿನ ಮಾಹಿತಿ ಇಂತಿದೆ:
ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ: ದಿನಾಂಕ 07-04-2019ರಿಂದ 13-04-2019ರ ವರೆಗೆ ಸಮಯ: ಮಧ್ಯಾಹ್ನ 02:30 ರಿಂದ ಸಂಜೆ 06:00ರವರೆಗೆ
01. ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪ ಮುಖ್ಯ ರಸ್ತೆ, ಮೊ: 8971960621,
02. ಶ್ರೀರಾಘವೇಂದ್ರಸ್ವಾಮಿಗಳ ಮಠ, ರಾಜರಾಜೇಶ್ವರಿ ನಗರ, ಮೊ: 9538349079
03. ಶ್ರೀ ಮಾಧ್ವ ಸಂಘ ಮಲ್ಲೇಶ್ವರಂ ಮೊ: 9900578368
04. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ತುರಹಳ್ಳಿ, ಮೊ: 9845620199
05. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಅಮರಜ್ಯೋತಿ ನಗರ, ಮೊ: 988065510
06. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಚಿಕ್ಕಲಸಂದ್ರ, ಮೊ: 9108580484 07. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಕುಮಾರಸ್ವಾಮಿ ಲೇಔಟ್, ಮೊ: 8050767630
08. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಇಟ್ಟಮಡು, ಮೊ: 9480449559 09. ಶ್ರೀ ಮಾಧ್ವ ಸಂಘ ರಾಜಾಜಿನಗರ ಮೊ: 8356852160
10. ಶ್ರೀ ಮಾಧ್ವ ಸಂಘ ಚಾಮರಾಜಪೇಟೆ ಮೊ: 9480236152
11. ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಕೋಣನಕುಂಟೆ ಮೊ: 9632747846 12. ಶ್ರೀ ರಾಘವೇಂದ್ರಸ್ವಾಮಿಮಠ, ಟಿ’ ಬ್ಲಾಕ್, ಜಯನಗರ, ದೂ.ವಾ.: 080-41169934
13. ದೊಡ್ಡನೆಕ್ಕುಂದಿ ಶ್ರೀಪೇಜಾವರ ಮಠ, ಮೊ: 9845435521
14. ಶ್ರೀಸುಬ್ರಹ್ಮಣ್ಯ ಮಠ. ಎಚ್. ಎಸ್. ಆರ್. ಲೇಔಟ್, ಮೊ: 9686813444 15. ಶ್ರೀಸುಬ್ರಹ್ಮಣ್ಯ ಮಠ, ಅಕ್ಷಯನಗರ, ಮೊ: 9008050122
16. ಶ್ರೀರಾಘವೇಂದ್ರಸ್ವಾಮಿಗಳ ಮಠ, ದೇವರ ಚಿಕ್ಕನಹಳ್ಳಿ ಮೊ: 9741337416
17. ಶ್ರೀರಾಘವೇಂದ್ರಸ್ವಾಮಿಗಳ ಮಠ, ಹೊಸಕೆರೆಹಳ್ಳಿ ಮೊ: 9448107190 18. ಶ್ರೀ ರಾಘವೇಂದ್ರಸ್ವಾಮಿಗಳ ಸನ್ನಿಧಿ, ದೇವಗಿರಿ ಮೊ: 08026712816 19. ಶ್ರೀ ರಾಘವೇಂದ್ರ ಮಠ, ಎನ್. ಆರ್. ಕಾಲೋನಿ ದೂ.ವಾ. 26625658/59
ಶಿಬಿರದಲ್ಲಿ ಏನೆಲ್ಲಾ ಕಲಿಸಲಾಗುತ್ತದೆ?
ಭಾರತೀಯತೆಯ ಚಿಂತನೆಯ ತಳಹದಿಯನ್ನು ಕಳೆದುಕೊಳ್ಳುತ್ತಿರುವ ಇಂದಿನ ಲೌಕಿಕಶಿಕ್ಷಣವು ಮಕ್ಕಳಲ್ಲಿ ಒತ್ತಡವನ್ನು ಉಂಟು ಮಾಡುತ್ತಿದೆ. ಈ ಶಿಬಿರದಲ್ಲಿ ಸಂಧ್ಯಾವಂದನೆ, ದೇವರಪೂಜೆ, ನಿತ್ಯಸ್ತೋತ್ರಗಳು, ವಿಷ್ಣುಸಹಸ್ರನಾಮ, ಭಗವದ್ಗೀತೆ, ಇತಿಹಾಸ-ಪುರಾಣದ ಕಥೆಗಳು, ಭಜನೆ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಧಾರ್ಮಿಕ ಶಿಕ್ಷಣ ಶಿಬಿರಗಳು ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರಗಳನ್ನು ಬೆಳೆಸಿ ಜವಾಬ್ದಾರಿಯುತ ನಾಗರಿಕರನ್ನಾಗಿಸುತ್ತದೆ. ಭಾರತೀಯ ಶ್ರೇಷ್ಠಚಿಂತನೆಗಳು ಎಲ್ಲ ಭಾಷೆಗಳ ತಾಯಿಯಾದ ಸಂಸ್ಕೃತದಲ್ಲಿ ಮಾತ್ರ ಶುದ್ಧವಾಗಿ ಸಿಗುತ್ತದೆ. ಇದರ ಕಲಿಕೆ ನಮ್ಮ ಪ್ರಾಚೀನ ಇತಿಹಾಸದ ಅನೇಕ ಸತ್ಯಗಳನ್ನು ಹೊರಗೆಡಹುತ್ತದೆ.
ನಮ್ಮ ಭಾರತದ ಬಗ್ಗೆ ಹೆಮ್ಮೆ ಎನಿಸುತ್ತದೆ. ಮಕ್ಕಳಲ್ಲಿ ಸಂಸ್ಕೃತದ ಕಲಿಕೆಯ ಅಭಿರುಚಿಯನ್ನು ಹುಟ್ಟಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಈ ಶಿಬಿರ ಸಹಕಾರಿಯಾಗುತ್ತದೆ. ಸ್ವಧರ್ಮದ ಅರಿವನ್ನು ಪಡೆಯಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದ್ದರಿಂದ ಎಲ್ಲ ಪೋಷಕರು ಮುಂದಿನ ಪೀಳಿಗೆಯನ್ನು ಸರಿದಾರಿಯತ್ತ ಕೊಂಡೊಯ್ಯುವ ಇಂತಹ ಶಿಬಿರಗಳಲ್ಲಿ ಮಕ್ಕಳೊಂದಿಗೆ ಭಾಗವಹಿಸುವುದು ಅತ್ಯಂತ ಅವಶ್ಯವಾಗಿದೆ. ಉಪನೀತರು, ಅನುಪನೀತರು, ಹೆಣ್ಣುಮಕ್ಕಳು, ಹೆಂಗಸರು, ಗಂಡಸರು ಎಲ್ಲರೂ ಈ ಶಿಬಿರಢದ ಉಪಯೋಗ ಪಡೆದುಕೊಳ್ಳಬಹುದು.
ಹಿರಿಯರಿಗೆ ಸಂಜೆ 4:00ರಿಂದ 6:00ರವರೆಗೆ ಪಾಠದ ವ್ಯವಸ್ಥೆ ಇರುತ್ತದೆ. ಹೆಣ್ಣುಮಕ್ಕಳಿಗೆ ಹರಿಭಕ್ತಿಸಾರ, ಲಕ್ಷ್ಮೀಶೋಭಾನೆ ಹರಿಕಥಾಮೃತಸಾರ, ದೇವರನಾಮಗಳನ್ನು ಕೂಡ ಕಲಿಸಿಕೊಡಲಾಗುವುದು. ಕಲಿಯುವ ಆಸಕ್ತಿಯೊಂದೇ ಈ ಶಿಬಿರದಲ್ಲಿ ಸೇರಲುಬೇಕಾದ ಅರ್ಹತೆ. ವಯಸ್ಸಿನ ಮಿತಿ ಇರುವುದಿಲ್ಲ. ಅವರವರಿಗೆ ಯೋಗ್ಯವಾದ ಪಾಠಗಳನ್ನು ಸಮರ್ಥವಾದ ಅಧ್ಯಾಪಕರು ಮಾಡುತ್ತಾರೆ. ಸಜ್ಜನ ಸಮಾಜವು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ಮೊಬೈಲ್: 8971960621, 9481773622
Discussion about this post