ಪಣಜಿ: ಅನಾರೋಗ್ಯದಿಂದ ನಿನ್ನೆ ನಿಧನರಾದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ.
ಸದ್ಯ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ನಂತರ ಬಿಜೆಪಿ ಕಚೇರಿಗೆ ತರಲಾಗುತ್ತದೆ. 10.30ಕ್ಕೆ ಕಾಲಾ ಅಕಾಡೆಮಿಗೆ ಶರೀರವನ್ನು ತಂದು ಆನಂತರ 10 ಗಂಟೆಯಿಂದ 4 ಗಂಟೆಯವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಸಂಜೆ 4 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 5 ಗಂಟೆಗೆ ಮಿಮ್ರಾರ್’ನಲ್ಲಿ ಅಂತ್ಯಸಂಸ್ಕಾ ನಡೆಯಲಿದೆ.
ಪರಿಕ್ಕರ್ ನಿಧನಕ್ಕೆ ಇಡಿಯ ದೇಶವೇ ಕಂಬನಿ ಮಿಡಿದಿದ್ದು, ಇಂದು ದೇಶದಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ.
Discussion about this post