ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಭಾಗೀಯ ರೈಲ್ವೆ Bengaluru Divisional Railway ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಶುತೋಷ್ ಕುಮಾರ್ ಸಿಂಗ್ ಅವರು, ಬೆಂಗಳೂರು ವಿಭಾಗದ ವಿವಿಧ ಸಾಧನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದಸ್ಯರಲ್ಲಿ ವಿವರಿಸಿದರು.
ಕ್ಯೂಆರ್ ಕೋಡ್ ಸೌಲಭ್ಯದ ಮೂಲಕ ಬುಕ್ ಮಾಡಲಾಗುವ ಕಾಯ್ದಿರಿಸದ ಟಿಕೆಟ್’ಗಳ ಶೇಕಡಾವಾರು ಪ್ರಮಾಣವು 2024-25ರಲ್ಲಿದ್ದ 11.19% ರಿಂದ 2025-26ರಲ್ಲಿ 29.94% ಕ್ಕೆ ಏರಿದೆ ಎಂದು ಮಾಹಿತಿ ನೀಡಿದರು.
2025-26ನೇ ಸಾಲಿನಲ್ಲಿ ಬೆಂಗಳೂರು ವಿಭಾಗವು 109.99 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದ್ದು, ಹಿಂದಿನ ವರ್ಷದಿಗಿಂತ 6.05% ವೃದ್ಧಿಯನ್ನು ದಾಖಲಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ಬೆಂಗಳೂರು ವಿಭಾಗವು ಉತ್ತಮ ಆದಾಯವನ್ನು ದಾಖಲಿಸಿದೆ. ಪ್ರಯಾಣಿಕರ ಆದಾಯ ರೂ. 2428.60 ಕೋಟಿ ಆಗಿದ್ದು, ಹಿಂದಿನ ಹಣಕಾಸು ವರ್ಷದಿಗಿಂತ 9.41% ವೃದ್ಧಿಯಾಗಿದೆ ಎಂದರು.
Also read: ತಾಳಗುಪ್ಪ-ಮೈಸೂರು, ಬೆಂಗಳೂರು-ಹೊಸಪೇಟೆ ಸೇರಿ 8 ರೈಲುಗಳು ಈ 8 ದಿನ ಬಾಣಾವರದಲ್ಲಿ ನಿಲುಗಡೆ
ಸರಕು ಸಾಗಣೆ ಆದಾಯ ರೂ. 351.45 ಕೋಟಿ ಆಗಿದ್ದು, 7.24% ಹೆಚ್ಚಳ ಕಂಡಿದೆ. ಪಾರ್ಸೆಲ್ ಆದಾಯ ರೂ. 140.32 ಕೋಟಿ ಆಗಿದ್ದು, 4.56% ವೃದ್ಧಿಯಾಗಿದೆ. ಕ್ಯಾಟರಿಂಗ್ ಆದಾಯ ರೂ. 17.38 ಕೋಟಿ ಆಗಿದ್ದು, 5.27% ಹೆಚ್ಚಳ ಕಂಡಿದೆ. ಜಾಹೀರಾತು ಆದಾಯ ರೂ. 15.75 ಕೋಟಿ ಆಗಿದ್ದು, 10.55% ವೃದ್ಧಿಯಾಗಿದೆ. ಟಿಕೆಟ್ ತಪಾಸಣಾ ಆದಾಯವೂ 39.13% ಹೆಚ್ಚಳಗೊಂಡು ರೂ. 39.68 ಕೋಟಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.
ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸಲು ಎಂ-ಯುಟಿಎಸ್ ಸಹಾಯಕ್ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಲಾಗಿದೆ. ಹಾಗೆಯೇ 2025-26ರ ಹಣಕಾಸು ವರ್ಷದಲ್ಲಿ ಬೆಂಗಳೂರು ವಿಭಾಗದ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ ಎಂದರು.
ನಮ್ಮ ನಕ್ಷೆ.ಕಾಮ್ ಮೂಲಕ ಡಿಜಿಟಲ್ ಸ್ಟೇಷನ್ ಪ್ರಮುಖ ನಿಲ್ದಾಣಗಳ ನಕ್ಷೆಗಳನ್ನು ಅಭಿವೃಧ್ದಿಪಡಿಸಲಾಗಿದೆ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಪುನರಾಭಿವೃದ್ಧಿ , ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಆಧುನೀಕರಣ ಮತ್ತು ಈಗಾಗಲೇ ನಡೆಯುತ್ತಿರುವ ಡಬ್ಲಿಂಗ್ ಮತ್ತು ನಾಲ್ಕು ಪಥ ಹಳಿ ಅಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಡಿಆರ್’ಯುಸಿಸಿ ಸದಸ್ಯರು ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಲ್ದಾಣಗಳು, ರೈಲು ಸೇವೆಗಳ ವಿಸ್ತರಣೆ, ಸ್ವಚ್ಛತೆ, ಕೇಟರಿಂಗ್ ಸೇವೆ, ಭದ್ರತೆ ಮತ್ತು ಇತರೇ ಪ್ರಯಾಣಿಕರ ಸೌಲಭ್ಯಗಳ ಕುರಿತು ಸಲಹೆ ನೀಡಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ಪುರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಕೆ. ಕೃಷ್ಣಚೈತನ್ಯ ಮತ್ತು ವಿಭಾಗದ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಡಿಆರ್’ಯುಸಿಸಿ ಸದಸ್ಯರಾದ ಜಿ.ವೇಣು, ಟಿ.ಜೆ. ಗಿರೀಶ್, ರಾಮಾವತ್ ಮಿಸ್ರಿಮಲ್, ಕರ್ಣಂ ರಮೇಶ್, ಅಶ್ವಿನ್ ಸೆಮ್ಲಾನಿ, ಎಸ್.ಸಿ. ಸತೀಶ, ನಟರಾಜನ್, ಬಿ.ವಿ. ವೆಂಕಟೇಶ್ ಲಾಡ್, ಚಿನ್ನಗುಟ್ಟಪ್ಪ, ಮೊಹಮದ್ ಬೇಗ್, ಲಕ್ಷ್ಮೀನಾರಾಯಣ ಮತ್ತು ವೀರಕ್ಯಾತರಾಯ ಮತ್ತು ಇತರೇ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Comments 1