ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಎರಡನೆಯ ಮಂತ್ರಾಲಯ ಎಂದು ಪ್ರಸಿದ್ಧಿ ಹೊಂದಿದ ಬೆಂಗಳೂರಿನ ಜಯನಗರದ ಐದನೆಯ ಬಡಾವಣೆಯಲ್ಲಿರುವ ನಂಜನಗೂಡು ಶ್ರೀಗುರು ರಾಯರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ ಆರಂಭವಾಗಿದ್ದು, ನ.30ರಂದು ಲಕ್ಷ ದೀಪೋತ್ಸವ ನಡೆಯಲಿದೆ.
ಶ್ರೀಮಠದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ ಡಿಸೆಂಬರ್ 14ವರಗೆ ಶ್ರೀಮಠದಲ್ಲಿ ಪ್ರತಿದಿನ ಸಂಜೆ 6:30 ಕ್ಕೆ ದೀಪೋತ್ಸವವು ನೆರವೇರಲಿದೆ.
ಈ ಕುರಿತಂತೆ ಮಾತನಾಡಿದ ಶ್ರೀಮಠದ ವ್ಯವಸ್ಥಾಪಕ ಆರ್.ಕೆ. ವಾದೀಂದ್ರಆಚಾರ್ಯರು, ಸಾಮೂಹಿಕ ಲಕ್ಷ ದೀಪೋತ್ಸವವು ನ.30 ರಂದು ಹಾಗೂ ಡಿ.14ರಂದು ನೆರವೇರಲಿದ್ದು ಮತ್ತು ಡಿ.5ರಂದು ಧಾತ್ರಿ ಹವನ ಹೋಮ ಏರ್ಪಡಿಸಲಾಗಿದೆ ಎಂದಿದ್ದಾರೆ.
ಮಾಸ್ಕ್ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಇರುವ ಕಾರಣ ಭಕ್ತರ ಆರೋಗ್ಯ ಮತ್ತು ಶ್ರೀಮಠದ ಹಿತ ದೃಷ್ಟಿಯಿಂದ ಶ್ರೀಮಠದ ಪ್ರವೇಶದ್ವಾರದ ಬಳಿ ಭಕ್ತರ ಕೈಗಳಿಗೆ ಸ್ಯಾನಿಟೈಸರ್, ಎಲೆಕ್ಟ್ರಾನಿಕ್ ಡಿವೈಸರ್ ವ್ಯವಸ್ಥೆ ಮಾಡಲಾಗಿದೆ.
ಶ್ರೀಮಠದ ಕಾವಲುಗಾರ ಬರುವ ಭಕ್ತರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದ ನಂತರ ಒಳಕ್ಕೆ ಬಿಡುತ್ತಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಶ್ರೀಗುರುರಾಯರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಮಾಹಿತಿಗಾಗಿ 9945429129. 9449133929. 8660349906. 08022443962ಗೆ ಸಂಪರ್ಕಿಸಬಹುದು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post