ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಹೊಸದಾಗಿ ನಿರ್ಮಿಸಲಾದ 3 ಮತ್ತು 4ನೇ ರೈಲು ಮಾರ್ಗಗಳನ್ನು ಈಶಾನ್ಯ ಗಡಿ ವೃತ್ತ ರೈಲ್ವೇ ಸುರಕ್ಷಾ ಆಯುಕ್ತ ಸುಮೀತ್ ಸಿಂಘಾಲ್ ಅವರು ಪರಿಶೀಲಿಸಿ ವೇಗದ ಪರೀಕ್ಷೆಯನ್ನು Baiyappanahalli and Bengaluru Cantonment speed test ನಡೆಸಿದರು.
ಬೆಂಗಳೂರು ಪೂರ್ವ ಹಾಲ್ಟ್ ಸ್ಟೇಷನ್ ಸೇರಿದಂತೆ 4.928 ಕಿಮೀ ಉದ್ದದ ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ – ಬೆಂಗಳೂರು ಕಂಟೋನ್ಮೆಂಟ್ ಚತುಷ್ಪಥ ಮಾರ್ಗವು ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಚತುಷ್ಪಥ ಯೋಜನೆಯ ಭಾಗವಾಗಿದೆ.
ಈ ಯೋಜನೆಯು ಬೆಂಗಳೂರು ಭಾಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಮತ್ತು ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ – ಬೆಂಗಳೂರು ಕಂಟೋನ್ಮೆಂಟ್ ಭಾಗದಲ್ಲಿ 4 ಪ್ರಮುಖ ಸೇತುವೆಗಳು, 3 ಸಣ್ಣ ಸೇತುವೆಗಳು (ಸಂಖ್ಯೆ 836, 838 ಮತ್ತು 841), 3 ರಸ್ತೆ ಮೇಲ್ಸೇತುವೆಗಳು, 7 ರಸ್ತೆ ಕೆಳಸೇತುವೆಗಳು ಮತ್ತು 3 ಪಾದಚಾರಿ ಮೇಲ್ಸೇತುವೆಗಳನ್ನು ಒಳಗೊಂಡಿದೆ.
ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ನೈಋತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ-ಆರ್’ಎಸ್’ಪಿ), ಬಿ ರಾಮ ಮೋಹನ್ ರೆಡ್ಡಿ, ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಮತ್ತು ಗತಿ ಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕ ಗುಲ್ ಅಶ್ಫಾಕ್ ಮೊಹಮ್ಮದ್ ಸೇರಿದಂತೆ ಇತರ ಹಿರಿಯ ರೈಲ್ವೇ ಅಧಿಕಾರಿಗಳು ತಪಾಸಣೆಯ ಸಮಯದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















