ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಘಾತದ ಸಮಯದಲ್ಲಿ ಆತ್ಮೀಯರು ಹಾಗೂ ಆಘಾತದಲ್ಲಿ ಸಿಲುಕಿರುವವರ ರಕ್ಷಣೆಗೆ ಜನಸಾಮಾನ್ಯರು ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ ಪಡೆದುಕೊಳ್ಳುವುದು ಅಗತ್ಯ ಎಂದು ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್ ಮುರಡಾ ಅಭಿಪ್ರಾಯಪಟ್ಟರು.
ವಿಶ್ವ ಟ್ರಾಮಾ ದಿನದ ಅಂಗವಾಗಿ ಇಂದು ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಬೇಸಿಕ್ ಲೈಫ್ ಸಪೋರ್ಟ್ ಮತ್ತು ಫಸ್ಟ್ ಏಡ್ ಟ್ರಾಮಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳಿಗೆ ಹಠಾತ್ತಾಗಿ ಹೃದಯಾಘಾತ, ಅಫಫಾತ ಅಥವಾ ಇನ್ನು ಯಾವುದಾದರೂ ಅವಘಡಗಳಾಗಿ ಆಘಾತಕ್ಕೀಡಾದಾಗ ಏನು ಮಾಡುವುದು ಎನ್ನುವುದು ತೋಚುವುದೇ ಇಲ್ಲ. ಪ್ರಾಥಮಿಕ ಚಿಕಿತ್ಸೆಯಿಂದ ದೊಡ್ಡ ತೊಂದರೆ ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ಜನರಿಗೆ ಸರಿಯಾದ ತಿಳುವಳಿಕೆಯೇ ಇರುವುದಿಲ್ಲ ಎಂದರು.
ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಕೊಂಡೊಯ್ಯುವ ವರೆಗಿನ ಅಮೂಲ್ಯ ಸಮಯ ಉಳಿಸುವ ನಿಟ್ಟಿನಲ್ಲಿ ಸಾಮಾನ್ಯವಾದ ತುರ್ತು ಜೀವರಕ್ಷಕ ಚಿಕಿತ್ಸೆಗಳ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯ. ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುವ ಹಾಗೂ ಆಫಾತಗಳನ್ನು ಹೇಗೆ ನಿಭಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ವಿಶ್ವ ಟ್ರಾಮಾ ದಿನದ ಅಂಗವಾಗಿ ಅಕ್ಟೋಬರ್ 18 ಮತ್ತು 19 ರಂದು ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸುಮಾರು 100 ಕ್ಕೂ ಹೆಚ್ಚು ಜನರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು ಬಹಳ ಸಂತಸದ ವಿಷಯ ಎಂದು ಹೇಳಿದರು.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ – ಅಡ್ವಾನ್ಸ್‌ಡ್ ಕಾರ್ಡಿಯಾಕ್ ಲೈಪ್ ಸಪೋರ್ಟ್ ನಿಂದ ತರಬೇತಿಯನ್ನು ಪಡೆದುಕೊಂಡಿರುವ ಡಾ. ಲೋರಿಯಾ ರಹಮಾನ್ ಅವರು ಈ ತರಬೇತಿಯನ್ನು ನಡೆಸಿಕೊಟ್ಟರು. ನಂತರ ಮಾತನಾಡಿದ ಅವರು, ಈ ತರಬೇತಿಯಲ್ಲಿ ಅಪಘಾತಗಳು ಮತ್ತು ಬಿದ್ದಾಗ, ಬೆಂಕಿಯ ಅವಘಢಗಳ ಸಂಧರ್ಭದಲ್ಲಿ, ಪ್ರಾಣಿಗಳು ಕಚ್ಚಿದ ಸಂಧರ್ಭದಲ್ಲಿ, ಹೃದಯಾಘಾತ ಮತ್ತು ಸ್ಟ್ರೋಕ್ ಗಳಾದಾಗ ನೀಡಬೇಕಾದಂತ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ನೀಡಲಾಗಿದೆ. ಹೆಚ್ಚು ಹೆಚ್ಚು ಜನರು ಈ ತರಬೇತಿಯನ್ನು ಪಡೆದುಕೊಳ್ಳುವುದರಿಂದ ಆಘಾತದ ಮತ್ತು ತುರ್ತು ಸಂಧರ್ಭಗಳಲ್ಲಿ ವೈದ್ಯಕೀಯ ನೆರವು ದೊರೆಯುವ ಮುನ್ನ ಹಲವಾರು ರೋಗಿಗಳ ಜೀವ ಉಳಿಸಬಹುದಾಗಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದಲ್ಲಿ ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ರಾಜೀವ್ ಬಶೇಟ್ಟೆ, ಮೆಡಿಕಲ್ ಸುಪರಿಂಡೆಂಟ್ ಡಾ ಪ್ರಥ್ಯುಶ್ ಮಿಗ್ಲಾನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್ ಸಿದ್ದಾರೆಡ್ಡಿ ಅವರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರಬೇತುದಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post