ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ ಪ್ರಶಸ್ತಿ ಪುರಸ್ಕೃತ ಶಡ್ ದರ್ಶನ ವಿದ್ವಾಂಸ, ನಗರದ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಹಯವದನ ಪುರಾಣಿಕ (80) ಸೋಮವಾರ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಉಡುಪಿ ಸಮೀಪ ಕಾಪು ಮೂಲದ ಪುರಾಣಿಕರು ಮಂತ್ರಾಲಯ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಉಪನ್ಯಾಸರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಸಂಪರ್ಕಕ್ಕೆ ಬಂದು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾರ್ಚಾರ್ಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದರು. ಸಂಸ್ಕೃತದಲ್ಲಿ ಅನೇಕ ಯಕ್ಷಗಾನ ಕೃತಿ ರಚಿಸಿದ್ದರು. ನಿವೃತ್ತಿ ನಂತರವೂ ಕೋಣನಕುಂಟೆ ಮನೆಯಲಿ ಶಾಸ್ತ್ರ ಗ್ರಂಥ ಆದ್ಯಯನ ನಿರತರಾಗಿದ್ದರು.
ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷಾ ಪ್ರೌಢಿಮೆ ಹೊಂದಿದ್ದ ಅವರು ಶ್ರೀಮನ್ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಕೀರ್ತಿಗೆ ಭಾಜನರಾಗಿದ್ದರು.
ಜ್ವರ ಕಾಣಿಸಿಕೊಂಡ ಕಾರಣ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೇ ನಿಧನರಾದರು ಎಂದು ವಿದ್ಯಾಪೀಠದ ವ್ಯವಸ್ಥಾಪಕ ಕೇಶವ ಆಚಾರ್ಯ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post