ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡು ಮತ್ತೆ ಆರಂಭಗೊಂಡಿರುವ ತಾಳಗುಪ್ಪ-ಬೆಂಗಳೂರು ರಾತ್ರಿ ರೈಲು ಸಂಚಾರವನ್ನು ಮಾರ್ಚ್ 31ರವೆರಗೂ ವಿಸ್ತರಣೆ ಮಾಡಲಾಗಿದ್ದು, ಇದೇ ವೇಳೆ ತಾಳಗುಪ್ಪ-ಮೈಸೂರು ಇಂಟರ್’ಸಿಟಿ ರೈಲು ಸಂಚಾರವನ್ನೂ ಸಹ ಜ.20ರಿಂದ ಆರಂಭಿಸಲಾಗುತ್ತಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದ್ದು, ಜ.20ರಿಂದ ಜ.31ರವರೆಗೂ ತಾಳಗುಪ್ಪ ಹಾಗೂ ಮೈಸೂರು ನಡುವಿನ ಇಂಟರ್ ಸಿಟಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಆರಂಭಿಸಲಾಗುತ್ತಿದೆ.
06295 ಸಂಖ್ಯೆಯ ರೈಲು ಜ.20ರಂದು ಮುಂಜಾನೆ 6 ಗಂಟೆಗೆ ಮೈಸೂರಿನಿಂದ ಹೊರಡಲಿದ್ದು, 10.45ಕ್ಕೆ ಶಿವಮೊಗ್ಗ, 1.15ಕ್ಕೆ ತಾಳಗುಪ್ಪ ತಲುಪಲಿದೆ.
ಅದೇ ರೀತಿ, 06296ಸಂಖ್ಯೆಯ ರೈಲು ಜ.20ರಂದು ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡಲಿದ್ದು, ಸಂಜೆ 4.50 ಶಿವಮೊಗ್ಗ ತಲುಪಿ, ರಾತ್ರಿ 10.15 ರಂದು ತಲುಪಲಿದೆ.ಇನ್ನು, ಈಗಾಗಲೇ ಸಂಚಾರನ್ನು ಮರು ಆರಂಭಿಸಿರುವ ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ರಾತ್ರಿ ರೈಲು ಸಂಚಾರವನ್ನು ಜ.31ರವರೆಗೂ ತಾತ್ಕಾಲಿಕವಾಗಿ ವಿಸ್ತರಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post