ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ. ಪಿ. ಭುಜಂಗರಾವ್ ಅವರ ನೇತೃತ್ವದಲ್ಲಿ ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 5 ರಿಂದ 8ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : ಮೇ 5-ಈಜುಕೊಳದ ಬಡಾವಣೆಯ ಶ್ರೀ ವಿಜಯ ವಿಠಲ ಭಜನಾ ಮಂಡಳಿ, ಮೇ 6-ಮತ್ತಿಕೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಮೇ 7-ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಗಳ ಸದಸ್ಯರುಗಳಿಂದ ಭಜನೆ.
ಪ್ರವಚನ ಕಾರ್ಯಕ್ರಮ : ಮೇ 5 ರಿಂದ 7ರ ವರೆಗೆ (ಪ್ರತಿದಿನ ಸಂಜೆ 7 ರಿಂದ 8) ಶ್ರೀ ಪ್ರಶಾಂತ ಭಾರ್ಗವಾಚಾರ್ಯರಿಂದ ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ : ಮೇ 8, ಶುಕ್ರವಾರ (ಸಂಜೆ 6-30 ರಿಂದ 8-00) “ಹರಿನಾಮ ಸಂಕೀರ್ತನೆ”. ಗಾಯನ :
ಕು. ಪ್ರಣೀತಾ ಟಿ. ಮಣೂರ್, ಪಿಟೀಲು : ಶ್ರೀ ಎಸ್. ಶಶಿಧರ್, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ. ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















