ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ನಿರ್ಧಾರವೊಂದರಲ್ಲಿ ಬೆಂಗಳೂರು-ಧಾರವಾಡ ಸೇರಿದಂತೆ ಹಲವು ವಂದೇ ಭಾರತ್ ರೈಲುಗಳ #Vande Bharath ಸಂಚಾರ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #South Western Railway ಮಾಹಿತಿ ಪ್ರಕಟಿಸಿದ್ದು, ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ ಪರಿಷ್ಕರಿಸಿದೆ. ಇದು ಮಾರ್ಚ್ 15, 2026 ರಿಂದ ಜಾರಿಗೆ ಬರಲಿದೆ.
ಯಾವೆಲ್ಲಾ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ:
- ರೈಲು ಸಂಖ್ಯೆ 20669 ಎಸ್’ಎಸ್’ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್’ಪ್ರೆಸ್: ಬೆಳಗಾವಿ (07:05/07:10 ಗಂಟೆ) ಮತ್ತು ಘಟಪ್ರಭಾ (07:48/07:50 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.
- ರೈಲು ಸಂಖ್ಯೆ 20661 ಕೆಎಸ್’ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್’ಪ್ರೆಸ್: ದಾವಣಗೆರೆ (09:30/09:32 ಗಂಟೆ), ಹಾವೇರಿ (10:20/10:22 ಗಂಟೆ) ಮತ್ತು ಎಸ್’ಎಸ್’ಎಸ್ ಹುಬ್ಬಳ್ಳಿ (11:15/11:20 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ವೇಳಾಪಟ್ಟಿಯಂತೆ ಸಂಚರಿಸಲಿದೆ.
- ರೈಲು ಸಂಖ್ಯೆ 20662 ಧಾರವಾಡ-ಕೆಎಸ್’ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್: ಹಾವೇರಿ (14:48/14:50 ಗಂಟೆ) ಮತ್ತು ದಾವಣಗೆರೆ (15:33/15:35 ಗಂಟೆ) ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಯಶವಂತಪುರ ನಿಲ್ದಾಣಕ್ಕೆ 19:21/19:23 ಗಂಟೆಗೆ ತಲುಪಿ, ನಿರ್ಗಮಿಸಲಿದೆ.
- ರೈಲು ಸಂಖ್ಯೆ 26751 ಬೆಳಗಾವಿ-ಕೆಎಸ್’ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್: ಹಾವೇರಿ (08:42/08:44 ಗಂಟೆ), ದಾವಣಗೆರೆ (09:28/09:30 ಗಂಟೆ), ತುಮಕೂರು (12:15/12:17 ಗಂಟೆ) ಮತ್ತು ಯಶವಂತಪುರ (13:23/13:25 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.

- ರೈಲು ಸಂಖ್ಯೆ 20704 ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್’ಪ್ರೆಸ್: ಹಿಂದೂಪುರ ನಿಲ್ದಾಣದಲ್ಲಿ (15:55/15:57 ಗಂಟೆ) ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ. ಅದೇ ರೀತಿ, ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್’ಪ್ರೆಸ್ ಹಿಂದೂಪುರದಲ್ಲಿ (12:17/12:19 ಗಂಟೆ) ಪರಿಷ್ಕೃತ ವೇಳಾಪಟ್ಟಿಯನ್ನು ಹೊಂದಿರುತ್ತದೆ.
- ರೈಲು ಸಂಖ್ಯೆ 22231 ಕಲಬುರಗಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್: ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (11:13/11:15 ಗಂಟೆ) ಮತ್ತು ಯಲಹಂಕ (12:58/13:00 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 22232 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್’ಪ್ರೆಸ್ ಯಲಹಂಕ (15:09/15:11 ಗಂಟೆ) ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (16:45/16:47 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ವೇಳಾಪಟ್ಟಿಯಂತೆ ಸಂಚರಿಸಲಿದೆ.
- ರೈಲು ಸಂಖ್ಯೆ 20642 ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್’ಪ್ರೆಸ್: ಹೊಸೂರು ನಿಲ್ದಾಣದಲ್ಲಿ (12:13/12:15 ಗಂಟೆ) ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.
ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸತಕ್ಕದ್ದು ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















