No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Monday, April 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಂಗಪ್ರವೇಶದಲ್ಲೇ ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದ ಸ್ತುತಿಶ್ರೀ ತಿರುಮಲೆ

ನೃತ್ಯ ವಿಮರ್ಶೆ | ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಪ್ರಸ್ತುತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 18, 2023
in Special Articles
0
ರಂಗಪ್ರವೇಶದಲ್ಲೇ ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದ ಸ್ತುತಿಶ್ರೀ ತಿರುಮಲೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ರಂಗಪ್ರವೇಶ ಅಥವಾ ಅರಂಗೇಟ್ರಮ್ ಒಂದು ಕಲಾವಿದನ ಬೆಳವಣಿಗೆಯ ಮೊದಲ ಹೆಜ್ಜೆ. ವರ್ಷಗಳಿಂದ ಸತತವಾಗಿ ಕಲೆಯನ್ನು ಅಭ್ಯಾಸ ಮಾಡಿ ಗುರುಗಳ ಅನುಮತಿ ಪಡೆದು ಕಲಾವಿದರು ಮೊದಲ ಬಾರಿ ವೇದಿಕೆಯನ್ನು ಏರುವ ಕಾರ್ಯಕ್ರಮವೇ ರಂಗಪ್ರವೇಶ. #Rangapravesh

ಉದಯೋನ್ಮುಖ ಕಲಾವಿದೆ ಕು.ಸ್ತುತಿಶ್ರೀ ತಿರುಮಲೆ ‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ 2023ರ ಆ.6ರಂದು ಬೆಂಗಳೂರಿನ ಜಯನಗರ ಬಡಾವಣೆಯ ಜೆ.ಎಸ್.ಎಸ್. ಸಭಾಂಗಣದಲ್ಲಿ ತಮ್ಮ ರಂಗಪ್ರವೇಶ ಪ್ರದರ್ಶನ ನೀಡಿದರು.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕು.ಸ್ತುತಿಶ್ರೀ ಇವರು ವಿದುಷಿ ಶ್ರೀರಂಜಿನಿ ಉಮೇಶ್ ಹಾಗೂ ಹಿರಿಯ ಗುರುಗಳಾದ ಶ್ರೀಮತಿ ರೇವತಿ ನರಸಿಂಹನ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ ಪ್ರಸ್ತುತ ‘ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್‘ನ ವಿದುಷಿ ಶ್ರೀಮತಿ ವೈ.ಜಿ. ಶ್ರೀಲತಾ ನಿಕ್ಷಿತ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿ, ಅವರ ಮಾರ್ಗದರ್ಶನದಲ್ಲಿ ರಂಗಪ್ರವೇಶ ಮಾಡಿದ್ದಾರೆ.

ಅದ್ಭುತವಾದ ಈ ರಂಗಪ್ರವೇಶವು ಓರ್ವ ನುರಿತ ಕಲಾವಿದೆ ನೀಡುವ ಕಾರ್ಯಕ್ರಮದಂತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ.
ಪ್ರೇಕ್ಷಕರ ಮನ ಗೆದ್ದರು
ಸ್ತುತಿಶ್ರೀ ತನ್ನ ರಂಗಪ್ರವೇಶದ ಪ್ರಾರಂಭದಲ್ಲಿ ಪುಷ್ಪಾಂಜಲಿ, ಊತ್ತುಕ್ಕಾಡು ವೆಂಕಟಸುಬ್ಬಯ್ಯ ಕವಿಯ ಗಂಭೀರ ನಾಟ ರಾಗದ ಶ್ರೀವಿಘ್ನರಾಜಂಭಜೆಯ ನಂತರ ಮಿಶ್ರ ಅಲರಿಪು ನರ್ತಿಸಿ, ಈ ಬಂಧಗಳಲ್ಲೇ ತಮ್ಮ ಛಾಪನ್ನು ಮೂಡಿಸಿದರು. ತದನಂತರ ಕೆಲವು ಅಪರೂಪದ ರಚನೆಗಳಿಂದ ಪ್ರೇಕ್ಷಕರ ಮನ ಗೆದ್ದರು. ಇಳಂಗೋ ಅಡಿಗ ವಿರಚಿತ ಚಿಲಪ್ಪತಿಕಾರಮ್ ನಿಂದ ಆಯ್ದ ಒಂದು ಭಾಗ ‘ವಡವರೈ ಮತ್ತಾಕ್ಕಿ ವಾಸುಕಿಯೈ ನಾಣಾಕ್ಕಿ’. ಗುರುಗಳಾದ ವಿದುಷಿ ಶ್ರೀಲತಾ ಅವರ ವಿಶೇಷ ನೃತ್ಯ ಸಂಯೋಜನೆಯಲ್ಲಿ ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆಯು ಮಣ್ಣುತಿನ್ನುತ್ತಿದ್ದ ಕೃಷ್ಣನ ಬಾಯಲ್ಲಿ ಮೂರು ಲೋಕಗಳನ್ನೂ ಕಾಣುತ್ತಾಳಷ್ಟೆ. ಹಾಗೆ ಕಾಣುವ ಆ ಲೋಕಗಳಲ್ಲಿ ಪ್ರಳಯವನ್ನೂ ಕೃಷ್ಣನ #Krishna ಲೀಲಾ ವಿಶೇಷಗಳನ್ನೂ ಕಾಣುತ್ತಾಳೆ.

ಅಪರೂಪದ ರಚನೆ
ರಂಗಪ್ರವೇಶದ ಮುಖ್ಯ ಭಾಗವಾಗಿ ಆಯ್ದುಕೊಂಡ ಮತ್ತೊಂದು ಅಪರೂಪದ ರಚನೆ, ಪದ್ಮಭೂಷಣ ಡಾ.ಎಮ್. ಬಾಲಮುರಳೀಕೃಷ್ಣ ಅವರ ‘ಷಣ್ಮುಖಪ್ರಿಯ ರಾಗದ  ಓಂಕಾರ ಪ್ರಣವ ನಾದೋದ್ಭವ ಶ್ರುತಿ ಲಯ ಸ್ವರ’ ಈ ಅದ್ಭುತ ರಚನೆಯ ಕ್ಲಿಷ್ಟಕರ  ಭಾವನೆಗಳನ್ನು ಗುರು ಶ್ರೀಲತಾ ಇವರು ನೃತ್ಯಕ್ಕೆ ಅಳವಡಿಸಿರುವುದು ಶ್ಲಾಘನೀಯವಾದರೆ, ಆ ಭಾವನೆಗಳನ್ನು ಅಷ್ಟೇ ಸೊಗಸಾಗಿ ನೃತ್ಯದಲ್ಲಿ ಅದ್ಭುತವಾಗಿ ಪ್ರದರ್ಶಿಸಿದ ಕಲಾವಿದೆಯನ್ನೂ ನಿಜಕ್ಕೂ ಮೆಚ್ಚಬೇಕು.
ನಂತರದ ಪ್ರಸ್ತುತಿಯಲ್ಲಿ  ಪೆರಿಯಾಳ್ವಾರ್ ಇವರ ಪಲ್ಲಾಂಡು, ಶ್ರೀ ಆಂಡಾಳ್ ಅವರ ನಾಚ್ಚಿಯಾರ್ ತಿರುಮೊಳಿ, ತಿರುಪ್ಪಾವೈಗಳ ಆಯ್ದ ಪಾಶುರಗಳಿಂದ ರಚಿಸಿ ನೃತ್ಯಕ್ಕೆ ಸಂಯೋಜಿಸಿದ ‘ಆಂಡಾಳ್ ಕಲ್ಯಾಣ’ ವೈಭವಯುತವಾಗಿತ್ತು. ಶ್ರೀ ಪುರಂದರ ದಾಸರ ‘ಹನುಮಂತ ದೇವ ನಮೋ’ ನೃತ್ಯ ಕಲಾವಿದೆಯ  ಸಾಧನೆಯ ಮೈಲಿಗಲ್ಲೆನ್ನುವಂತೆ ಅತ್ಯಂತ  ಆಕರ್ಷಕವಾಗಿದ್ದು  ಹನುಮಂತನ ‘ಲಂಕಾದಹನ’ ಸನ್ನಿವೇಷವು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ ಲಾಲ್ಗುಡಿ ಜಿ.ಜಯರಾಮನ್ ಅವರ ಮೋಹನ ಕಲ್ಯಾಣಿ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು
ಪ್ರದರ್ಶನಕ್ಕೆ ಅತ್ಯಂತ ಉತ್ತಮ ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು ಸಂಗೀತದಲ್ಲಿ ವಿ.ರೋಹಿತ್ ಭಟ್, ನಟುವಾಂಗದಲ್ಲಿ  ವಿದುಷಿ ಶ್ರೀಲತ ನಿಕ್ಷಿತ್, ಮೃದಂಗ ವಿದ್ವಾನ್ ಹರ್ಷ ಸಾಮಗ, ಕೊಳಲು ಶ್ರೀ ಮಹೇಶ್ ಸ್ವಾಮಿ, ವೈಲಿನ್ ನಲ್ಲಿ   ಶ್ರೀ ಪ್ರಾದೇಶ್ ಆಚಾರ್,  ಹಾಗೂ ರಿದಮ್  ಪ್ಯಾಡ್ ನಲ್ಲಿ ಶ್ರೀ ಕಾರ್ತಿಕ್ ಭಟ್. ಭರತನಾಟ್ಯ ಗುರು ಶ್ರೀಮತಿ  ರೂಪಶ್ರೀ ಮದುಸೂದನ್  ಇವರು ಈ ಅದ್ಭುತ ಕಾರ್ಯಕ್ರಮವನ್ನು ಚೊಕ್ಕವಾಗಿ ನಿರ್ವಹಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005.mp4
Tags: BENGALURUBharatanatyamDanceKannada News WebsiteLatest News KannadaRangapraveshaನೃತ್ಯನೃತ್ಯ ಕುಸುಮಾಂಜಲಿಬೆಂಗಳೂರುರಂಗಪ್ರವೇಶಹಿಮ್ಮೇಳ
Share197Tweet123Send
Previous Post

ಆ.19, 20ರಂದು ವರ್ಷ ವೈಭವ – 2023: ಡಾ. ಕೆ.ಎಸ್. ಪವಿತ್ರಾ ಅವರಿಂದ ನೃತ್ಯ ಪ್ರಸ್ತುತಿ

Next Post

ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ

ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

 ಹುಬ್ಬಳ್ಳಿ – ಅಲಿಪುರ್ ದ್ವಾರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ 

April 20, 2026
ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ: ಅರ್ಜಿ ಆಹ್ವಾನ

ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ: ಅರ್ಜಿ ಆಹ್ವಾನ

April 20, 2026
ಏ.21 ರಿಂದ 25ರವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನ – ಕಲ್ಯಾಣೋತ್ಸವ

ಏ.21 ರಿಂದ 25ರವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನ – ಕಲ್ಯಾಣೋತ್ಸವ

April 20, 2026
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ DRM ಬೇಲಾ ಮೀನಾ ಭೇಟಿ, ಪರಿಶೀಲನೆ

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ DRM ಬೇಲಾ ಮೀನಾ ಭೇಟಿ, ಪರಿಶೀಲನೆ

April 20, 2026
ಏ.23, 24ರಂದು ಸಿಇಟಿ ಪರೀಕ್ಷೆ | ಅಕ್ರಮ ತಡೆಯಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ: ಅಪರ ಜಿಲ್ಲಾಧಿಕಾರಿ ಅಭಿಷೇಕ್ 

ಏ.23, 24ರಂದು ಸಿಇಟಿ ಪರೀಕ್ಷೆ | ಅಕ್ರಮ ತಡೆಯಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ: ಅಪರ ಜಿಲ್ಲಾಧಿಕಾರಿ ಅಭಿಷೇಕ್ 

April 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL