ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೆಲವು ದೇಶಗಳಲ್ಲಿ ಜನ ಸಂಖ್ಯೆ ಹೆಚ್ಚಿದ್ದರೆ ಮತ್ತೆ ಹಲವೆಡೆ ಜನ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಜನಸಂಖ್ಯಾ ಸ್ಫೋಟದಿಂದ ದೇಶದ ಅಭಿವೃದ್ಧಿಯ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.
ಆರೋಗ್ಯ ಇಲಾಖೆ ವತಿಯಿಂದ ಹಳೆ ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನ ಸಂಖ್ಯೆ ಹೆಚ್ಚುವುದರಿಂದ ದೇಶದ ಅಭಿವೃಧ್ದಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗೂ ಭೌಗೋಳಿಕವಾಗಿ ದೇಶದ ಅನೇಕ ಕಡೆ ಇಂತಹ ಸಂಗತಿಗಳ ಬಗ್ಗೆ ಪ್ರಚಾರ ಮಾಡಲು ಸಾಧ್ಯವಾಗದೆ ಅನೇಕ ಸಮಸ್ಯೆಗಳು ಎದರಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗುತ್ತಿದೆ ಎಂದು ಹೇಳಿದರು.
ಕೊರೋನ ಇನ್ನೂ ಕಡಿಮೆಯಾಗಿಲ್ಲ. ಆದರೆ ತಾತ್ಕಾಲಿಕವಾಗಿ ನಿಯಂತ್ರಣದಲ್ಲಿದೆ ಎಂಬುದು ಸಮಾಧಾನದ ಸಂಗತಿಯಾಗಿದೆ. ಆದರೆ ಮೂರನೆಯ ಅಲೆ ಬರುವ ಮೊದಲೇ ಜನರು ಈಗಲೇ ಜಾಗೃತರಾಗಬೇಕು. ಕಂಟೋನ್ಮೇಂಟ್ ಜೋನ್ ನಿಂದ ನಾವಿನ್ನು ಹೊರ ಬಂದಿಲ್ಲ. ಇದನ್ನು ಅರಿತು ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ವೇದಿಕೆಯಕಲ್ಲಿ ಟಿಹೆಚ್‌ಒ ಡಾ. ಅಶೋಕ್, ಎಎಂಒ ಡಾ. ಮಲ್ಲಪ್ಪ, ಡಾ. ಶಿವಪ್ರಕಾಶ್, ಡಾ. ವರ್ಷಾ ಉಪಸ್ಥಿತರಿದ್ದರು. ಶೃತಿ ಭಾ ಪ್ರಾರ್ಥನೆ ಮಾಡಿದರು. ರೇವತಿ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post