ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನ ಜನರ ಅನುಕೂಲಕ್ಕಾಗಿ ಶಿವಮೊಗ್ಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗನ್ನು ಉಚಿತವಾಗಿ ನೀಡಲಾಯಿತು.
ನಿರ್ಮಲಾ ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ಹಿಲರಿ ಅವರಿಗೆ ಶಿವಮೊಗ್ಗದ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್‌ನ ನಿರ್ದೇಶಕ ಕೆ.ಸಿ. ಬಸವರಾಜ್ ಆಕ್ಸಿಜನ್ ಕಾನ್ಸನ್‌ಟ್ರೇಟಾರ್‌ಗಾಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಸಿ.ಬಸವರಾಜು, ಬಡಜನರ ಅನುಕೂಲಕ್ಕಾಗಿ ದಾನಿಗಳ ನೆರವಿನಿಂದ ಒದಗಿಸಿರುವ ದುಬಾರಿ ಬೆಲೆಯ ಈ ಅಕ್ಷೀಜನ್ ಕನ್ಸೆನ್‌ಟ್ರೇಟಾರ್‌ಗಳನ್ನು ನಿರ್ಮಲಾ ಆಸ್ಪತ್ರೆಗೆ ಉಚಿತವಾಗಿ ನೀಡಲಾಗಿದ್ದು, ತಾಲೂಕಿನ ಬಡಜನರು ವಿಶೇಷವಾಗಿ, ಕೋವಿಡ್ ರೋಗಿಗಳಿಗೆ ಇವುಗಳು ಸಹಾಯವಾಗಲಿದೆ ಎಂದರು.
ಕೊರೋನ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಜನರ ಜೀವಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅದರಲ್ಲಿಯೂ ಬಡಜನರ ನೆರವಿಗೆ ಧಾವಿಸಬೇಕಾಗಿರುವುದು ಎಲ್ಲರ ಆದ್ಯತೆ ಆಗಬೇಕು ಎಂದರು.
ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪುವುದನ್ನು ತಪ್ಪಿಸಲು ಹಾಗೂ ತುರ್ತು ಸಂದರ್ಭದಲ್ಲಿ ಬಳಸಲು ಈ ಕಾನ್ಸೆನ್‌ಟ್ರೇಟರ್ ಗಳು ಸಹಾಯ ಆಗಲಿವೆ ಎಂದರು.
ಶಿವಮೊಗ್ಗದ ಎಸ್‌ಎಮ್‌ಎಸ್‌ಎಸ್ ಸಂಸ್ಥೆಯ ನಿರ್ದೇಶಕ ಫಾ. ರೋಷನ್ ಪಿಂಟೋ ಮಾತನಾಡಿ, ಕೊರೋನಾ ರೋಗಿಗಳಿಗೆ ಇವುಗಳಿಂದ ಹೆಚ್ಚಿನ ಸಹಾಯವಾಗಲಿದೆ. ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ನ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post