ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ ಸಂಭವಿಸಿದ್ದು, ದೈಹಿಕ ಶಿಕ್ಷಕ ಹರಿಕೃಷ್ಣ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶೈಕ್ಷಣಿಕ ಪ್ರವಾಸಕ್ಕೆ ತೆರಲಿದ್ದ ಬಸ್ ವಾಪಾಸ್ ಮರಳುವಾಗ ತಾಲೂಕಿನ ಕಲ್ಲಿಹಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್’ನಲ್ಲಿದ್ದ ದೈಹಿಕ ಶಿಕ್ಷಕ ಹರಿಕೃಷ್ಣ(45) ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಹಾಗೂ ನಿರ್ವಾಹಕ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹರಿಕೃಷ್ಣ ಅವರು ಪ್ರಸ್ತುತ ಮಂಜುನಾಥ ಪ್ರೌಢಶಾಲೆ ಮಾರಶೆಟ್ಟಿಹಳ್ಳಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಾಲಾ ವತಿಯಿಂದ ಪ್ರವಾಸಕ್ಕೆ ತೆರಳಿ, ಪ್ರವಾಸವನ್ನು ಮುಗಿಸಿಕೊಂಡು ಮಕ್ಕಳನ್ನು ಮಂಜುನಾಥ ಪ್ರೌಢಶಾಲೆಗೆ ಬಿಟ್ಟು ನಂತರ, (ಅರಬಿಳಚಿ ಕ್ಯಾಂಪ್ ವಿಶ್ವನಗರ) ಹೋಗುವಾಗ ಬಸ್ಸಿನಲ್ಲಿ ಹರಿಕೃಷ್ಣ ಮತ್ತು ಮೂವರು ಮಕ್ಕಳು ಇದ್ದರು. ಈ ವೇಳೆಯಲ್ಲಿ ಶಾಲೆಯಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಮಾರಶೆಟ್ಟಿಹಳ್ಳಿ ಮತ್ತು ಅರಬಿಳಚಿ ಮಾರ್ಗದ ಮಧ್ಯದಲ್ಲಿ ಅಪಘಾತ ಸಂಭವಿಸಿದೆ. ಮೃತ ಶಿಕ್ಷಕ ಕಲ್ಲಿಹಾಳು ಸಮೀಪದ ವಿಶ್ವನಗರದ ನಿವಾಸಿ. ಅಪಘಾತದಲ್ಲಿ ಶಿಕ್ಷಕನ ತಲೆಗೆ ತೀವ್ರ ಪೆಟ್ಟು ಬಿದ್ದುರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಬಸ್’ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಬಸ್ ಕ್ಲಿನರ್’ರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರಗೆ ದಾಖಲಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post