ಭದ್ರಾವತಿ: ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ವಿಚಾರಣೆ ನಡೆಸಿ ವಾದ ಮಂಡಿಸಲು 50 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ನಗರದ 4 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ರವೀಂದ್ರಪ್ಪ ಎಂಬುವವರು ಗುರುವಾರ ಕೋರ್ಟ್ ಆವರಣದಲ್ಲಿ 20 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
2016 ರಲ್ಲಿ ನಡೆದ ನಿರಂಜನ್ ಕದಂ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೃತ ಸಂಬಂಧಿ ಸುನಿಲ್ ಗಾಯಕ್ವಾಡ್ ಎಂಬುವವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬೇಡಿಕೆ ಇಟ್ಟಿದ್ದ ಹಣದಲ್ಲಿ ಮುಂಗಡವಾಗಿ ಎರಡು ಕಂತುಗಳಲ್ಲಿ ಮೊದಲು 2 ನಂತರ 3 ಸಾವಿರ ರೂ ಹಣವನ್ನು ನೀಡಲಾಗಿತ್ತು.
ಗುರುವಾರ 20 ಸಾವಿರ ಹಣವನ್ನು ನೀಡುವಾಗ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ವೇಣುಗೋಪಾಲ್, ಸಿಪಿಐ ವಿರೇಂದ್ರ, ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ವಸಂತ, ನಾಗರಾಜ್, ಹರೀಶ್, ಶ್ರೀನಿವಾಸ್, ಯೋಗೀಶ್ವರಪ್ಪ, ಸುರೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post