ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಳೆದ ನಾಲ್ಕೈದು ದಿನಗಳಿಂದ ನಗರಸಭೆ ಸಹಕಾರದಲ್ಲಿ ಅಗ್ನಿಶಾಮಕದಳ ಇಲಾಖೆಯು ಜಂಟಿಯಾಗಿ ನಗದಾದ್ಯಂತ ಕ್ರಿಮಿನಾಶಕ ಸಂಪಡಿಸುವ ಕಾರ್ಯದಲ್ಲಿ ತೊಡಗಿದೆ.
ಬುಧವಾರವು ಸಹ ನಗರ ವ್ಯಾಪ್ತಿಯ ಜನ್ನಾಪುರ, ವಿಐಎಸ್’ಎಲ್ ಕಾರ್ಖಾನೆ ವ್ಯಾಪ್ತಿಯ ಹಾಗು ಕಾಗದನಗರದ ಅನೇಕ ವಾರ್ಡುಗಳಲ್ಲಿ ಕ್ರಿಮಿನಾಶಕ ಸಿಂಪಡಿಸುವಲ್ಲಿ ಮುಂದಾಗಿದೆ. ನಗರಸಭೆ ಪೌರಾಯುಕ್ತ ಮನೋಹರ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ದಳದ ವಸಂತಕುಮಾರ್ ಇಲಾಖೆಯ ಸಿಬ್ಬಂದಿಗಳ ಸಹಕಾರದಲ್ಲಿ ನೆರವೇರಿತು.
ಜನ್ನಾಪುರ ಭಾಗದಲ್ಲಿ ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ವೇಣುಗೋಪಾಲ್ ಒತ್ತಾಯದ ಮೇರೆಗೆ ಪೌರಾಯುಕ್ತ ಮನೋಹರ್, ಅಗ್ನಿಶಾಮಕದಳ ಅಧಿಕಾರಿ ವಸಂತಕುಮಾರ್ ಈ ಪ್ರದೇಶಗಳಿಗೆ ಕ್ರಿಮಿನಾಶಕ ಸಿಂಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಅನೇಕ ಸ್ಥಳೀಯರು ಭಾಗವಹಿಸಿದ್ದರು.
ವೇಣುಗೋಪಾಲ್ ಒತ್ತಾಯ
ವಿಶ್ವದಲ್ಲಿ ಹರಡಿರುವ ಮಹಾಮಾರಿ ಕರೋನಾ ಭೀತಿಯಿಂದ ಸಾರ್ವಜನಕರು ಮನೆಯಿಂದ ಹೊರ ಬರಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಯಿಲೆಯು ಜಿಲ್ಲೆಗೆ ಪ್ರವೇಶ ಮಾಡುವ ಮುನ್ನ ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ, ಕಾಗದ ಕಾರ್ಖಾನೆ ಹಾಗು ವಿಐಎಸ್’ಎಲ್ ಕಾರ್ಖಾನೆಯಲ್ಲಿರುವ ಅಗ್ನಿಶಾಮಕ ದಳದ ವಾಹನಗಳನ್ನು ಸೇವೆಗೆ ಸಮರ್ಪಿಸಿ ನಗರದ 35 ವಾರ್ಡುಗಳಿಗೂ ಕ್ರಿಮಿನಾಶಕ ಸಿಂಪಿಡಿಸುವ ಮೂಲಕ ಎಲ್ಲರನ್ನು ಆರೋಗ್ಯವಂತರನ್ನಾಗಿ ಮಾಡುವತ್ತ ಕ್ರಮ ಕೈಗೊಳ್ಳಬೇಕೆಂದು ಈ ಹಿಂದೆ ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಈ ಭಾಗಗಳಿಗೆ ಸಿಂಪಡನೆ ಮಾಡಲಾಗುತ್ತಿದೆ ಎಂದು ವೇಣುಗೋಪಾಲ್ ಹರ್ಷ ವ್ಯಕ್ತಪಡಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post