ಭದ್ರಾವತಿ: ವಿದ್ಯಾರ್ಥಿಗಳು ಶಿಸ್ತು ಕಲಿಕೆಗೆ ಎನ್‍ಸಿಸಿ ಹಾಗು ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳಂತಹ ತರಬೇತಿಗಳು ಅತ್ಯಾವಶಕ ಎಂದು ನಗರಸಭಾ ಪೌರಾಯುಕ್ತ ಮನೋಹರ್ ಹೇಳಿದರು.
ಶನಿವಾರ ಹಳೇನಗರ ಸಂಚಿಯ ಹೊನ್ನಮ್ಮ ಸರಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕಾದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಕಲಿತ ಮೆಟ್ಟಿಲುಗಳು ಮುಂದೆ ಸಹಕಾರಿಯಾಗಲಿದೆ. ಅದೇ ಮುಂದಿನ ಜೀವನಕ್ಕು ದಾರಿದೀಪವಾಗಲಿದೆ ಎಂದರು.
ಹಳೇನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಭರತ್ ಕುಮಾರ್ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರಕಾರ ಯುವ ಶಕ್ತಿಗಳಾಗಿ ಪರಿವರ್ತನೆ ಹಾಗು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಎನ್‍ಸಿಸಿ ಮಾದರಿಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‍ಪಿಸಿ) ಜಾರಿಗೆ ತಂದಿದೆ. ಪೊಲೀಸ್ ಮತ್ತು ಜನ ಸಾಮಾನ್ಯರ ಸೇತುವೆಯಾಗಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.
ಕೆಎಸ್‍ಆರ್‍ಪಿ ಆರ್‍ಎಸ್‍ಐ ಎ.ಟಿ.ಸಂತೋಷ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕೆಂಬ ಉದ್ದೇಶ ಹೊತ್ತಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ರವರು 2010 ರಲ್ಲಿ ಜನಸ್ನೇಹಿ ಪೊಲೀಸ್ ಮಾದರಿಯಾಗಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಜಾರಿಗೆ ತಂದಿದ್ದರು. ಅದು ರಾಜ್ಯದಲ್ಲಿಯೂ ವಿಸ್ತರಿಸುವ ಉದ್ದೇಶ ಹೊತ್ತ ಸರಕಾರವು ಕಳೆದ 5 ರ್ಷಗಳಿಂದೆ ಪೊಲೀಸ್ ಇಲಾಖೆ ಜೊತೆಗೆ ಭಾರತ ದೇಶದ ಬಲಿಷ್ಟದ ದೃಷ್ಟಿಯಿಂದ ಎಸ್‍ಪಿಸಿ ತೆರೆಯಲಾಗಿದೆ.
ಈ ಯೋಜನೆಯು ಸರಕಾರಿ ಹಾಗು ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಜಾರಿಯಲ್ಲಿದ್ದು ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಅನುಷ್ಟಾನ ಗೊಳಿಸಿ ಹಳೇನಗರದ ಸಂಚಿಯ ಹೊನ್ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಜಾರಿಗೆ ತಂದಿರುವ ಯೋಜನೆಯಿಂದ ಉತ್ತಮ ಶಿಕ್ಷಣದ ಜೊತೆಗೆ ಸಾರ್ವಜನಿಕ ಸೇತುವೆಯಾಗಿ ನೈತಿಕತೆ, ನಾಗರೀಕ ಸಂಸ್ಕೃತಿ, ಹಿತಾಸಕ್ತಿ ಮುಂತಾದವುಗಳಿಗೆ ಒತ್ತು ನೀಡಲು ಚಿಂತನೆ ಮಾಡಲಾಗಿದೆ ಎಂದರು.
ಕಾಲೇಜಿನ ಉಪ ಪ್ರಾಚಾರ್ಯರಾದ ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಮೇಘರಾಜ್, ಎಸ್‍ಡಿಎಂಸಿ ಸದಸ್ಯೆ ಸುಜಾತ, ಸಹ ಶಿಕ್ಷಕಿ ಉಮಾ ಸೇರಿದಂತೆ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Stiff fingers every morning? Your joints may be sending an early warning
Kalpa Media House | Special Article | The alarm rings, and you reach out to switch it off. But your...
Read moreDetails






