No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿ: ಸಿಎಂ ಯಡಿಯೂರಪ್ಪ ಸೂಚನೆ

kalpa News by kalpa News
August 4, 2019
in ರಾಷ್ಟ್ರೀಯ
0
ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿ: ಸಿಎಂ ಯಡಿಯೂರಪ್ಪ ಸೂಚನೆ
Share on FacebookShare on TwitterShare on WhatsApp

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಿಂದ ನೀಲನಕ್ಷೆ ಸಿದ್ಧಪಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಸಿಎಂ ಗೃಹಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರವಾಸಗಳು ಕೇವಲ ಚೇತೋಹಾರಿ ಮಾತ್ರವಲ್ಲ. ಪ್ರವಾಸಿಗರ ಆಗಮನದಿಂದ ಸ್ಥಳೀಯರಿಗೆ ಸ್ವಉದ್ಯೋಗ ಲಭಿಸುತ್ತದೆ. ಸದ್ಯ ಶೇ.12ರಷ್ಟು ಆರ್ಥಿಕ ಆದಾಯ ಗಳಿಸುತ್ತಿರುವ ಪ್ರವಾಸೋದ್ಯಮ ಮುಂಬರುವ 2025 ರವೇಳೆಗೆ ಶೇ.25ರಷ್ಟಾದರೂ ಆರ್ಥಿಕ ಆದಾಯವನ್ನು ರಾಜ್ಯದ ಬೊಕ್ಕಸಕ್ಕೆ ತುಂಬಿ ಕೊಡುವಂತಾಗಬೇಕು. ಇಂದಿನ ಸಭೆಯ ಚಿಂತನೆಗಳು ರೂಪಕ್ಕೆ ಬರಲಿ. ಕನಿಷ್ಠ ಹದಿನೈದು ದಿನಕ್ಕೆ ಒಮ್ಮೆ ಪ್ರವಾಸೋದ್ಯಮ ಪ್ರಗತಿ ಬಗ್ಗೆ ಸಮೀಕ್ಷಾ ಸಭೆ ನಡೆಸಿ ಎಂದರು.

ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಿ, ಅದನ್ನು ಸಮರ್ಥವಾಗಿ ಕಾರ್ಯಗತಗೊಳಿಸಿದಾಗ ಮಾತ್ರ ರಾಜ್ಯದ ಬೊಕ್ಕಸಕ್ಕೆ ಇದರಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು ಎಂದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರು, ತಮ್ಮ ಪ್ರತಿಷ್ಠಾನದ ವತಿಯಿಂದ ಕೈಗೊಂಡಿರುವ ಪ್ರಗತಿ ಚಟುವಟಿಕೆಗಳನ್ನು ವಿವರಿಸಿದರು. ಸಂಗಡ ಪ್ರವಾಸಿ ಪ್ರಗತಿ ಕಾರ್ಯಪಡೆ(Tourism Task Force TTF) ಬಗ್ಗೆಯೂ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಶಿವಮೊಗ್ಗ ಜಿಲ್ಲೆಯಲ್ಲಿನ ಪ್ರವಾಸೀತಾಣಗಳ ಅಭಿವೃದ್ಧಿ ಕುರಿತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಅವರೊಂದಿಗೆ ಚರ್ಚಿಸಿದರು. ಈ ಸಭೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಶ್ರಿಮತಿ ಸುಧಾಮೂರ್ತಿ ಅವರು ಉಪಸ್ಥಿತರಿದ್ದರು.

ನಂತರ ಮಾತನಾಡಿದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಲ.ನಾ. ಕಾಶಿ ಅವರು, ಸದ್ಯ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಅವಕಾಶವಿರುವ ಪ್ರಸ್ತಾವನೆ ಮಾಡಿದರು.

ಆಗುಂಬೆ ಅತ್ಯಂತ ಆಕರ್ಷಣೀಯ ತಾಣವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೇವಲ ಅದು ಸೂರ್ಯಾಸ್ತ ಸವಿಯುವುದೊಂದಕ್ಕೇ ಸೀಮಿತವಾಗಬಾರದು. ಆಗುಂಬೆಯನ್ನು ಕೇಂದ್ರವಾಗಿರಿಸಿ ಶೃಂಗೇರಿ, ಕುಂದಾದ್ರಿ, ಕವಲೆದುರ್ಗ, ನಗರ, ಗೇರುಸೊಪ್ಪ ಇತ್ಯಾದಿ ಅರಣ್ಯ ಪರಿಸರದೊಳಗೆ ಹಾದುಹೋಗುವ ಚಾರಣಿಗ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕಿದೆ ಎಂದರು.

ಅಲ್ಲಲ್ಲಿ ಚಾರಣಿಗರಿಗೆ ತಂಗುದಾಣಗಳು, ಆಹಾರ ಲಭ್ಯ ಮಳಿಗೆ, ಟೆಂಟ್ ಹಾಕಲು ಉಪಕರಣಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇತ್ಯಾದಿಗಳನ್ನು ವ್ಯವಸ್ಥೆ ಮಾಡಬೇಕು. ಸನಿಹದ ಗ್ರಾಮಗಳ ಕೆರೆಗಳ ಅಭಿವೃದ್ಧಿ, ಅಲ್ಲಿ ಬೋಟಿಂಗ್ ಸೌಕರ್ಯ, ಇನ್ನೂ ವಿಶೇಷವೆಂದರೆ ಊರುಗಳಲ್ಲಿ ವಿಶಿಷ್ಠತೆಗೆ ಹೆಸರಾದ ಪಾರಂಪರಿಕ ಮನೆತನ ಅವುಗಳ ಸಂಸ್ಕೃತಿ, ಆಹಾರ ಪದ್ಧತಿ, ವೇಷಭೂಷಣ, ಗೃಹವಿನ್ಯಾಸ, ಗೃಹಾಲಂಕಾರ ಇವುಗಳೂ ಕೂಡ ಪ್ರವಾಸಿಗರಲ್ಲಿ ಆಸಕ್ತಿಯುಂಟು ಮಾಡುತ್ತವೆ. ಅಲ್ಲಿನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಪ್ರೇರೇಪಿಸುತ್ತವೆ ಎಂದರು.

ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ವೇದಿಕೆ ಹಮ್ಮಿಕೊಂಡಿರುವ ಹಲಸಿನ ಮೇಳ, ಮಾವಿನ ಊಟದ ಸವಿ ಇತ್ಯಾದಿ ಕಾರ್ಯಕ್ರಮಗಳನ್ನು ಬೇರೆ ಜಿಲ್ಲೆಗಳಲ್ಲೂ ಸ್ಥಳೀಯ ಸಮುದಾಯದ ಅಭಿರುಚಿಗೆ ತಕ್ಕಂತೆ ಹಮ್ಮಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದ ಅವರು, ಇತ್ತೀಚೆಗೆ ಯಶಸ್ವಿಯಾಗಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ಪ್ರವಾಸಿಗರಿಗೋಸ್ಕರ ಕೆಲವು ಪ್ರೇಕ್ಷಣೀಯ ತಾಣಗಳಿಗೆ ಕಡಿಮೆ ದರದಲ್ಲಿ ಬಸ್ ಸೌಕರ್ಯ ಏರ್ಪಡಿಸಲಾಗಿತ್ತು. ಈ ಬಗ್ಗೆ ಪ್ರವಾಸಿಗರು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.

ಶಿವಮೊಗ್ಗದ ಶಿವಪ್ಪನಾಯಕ ಅರಮನೆಗೆ ಧ್ವನಿ ಬೆಳಕು ವ್ಯವಸ್ಥೆ ಮಾಡಿದರೆ ಜಿಲ್ಲೆಯ ಪ್ರಮುಖ ಅರಸು ಮನೆತನದ ಇತಿಹಾಸವನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಟ್ಟಂತಾಗುತ್ತದೆ. ಭದ್ರಾ ಜಲಾಶಯದ ಸನಿಹ ಕೆಆರ್’ಎಸ್ ಬೃಂದಾವನ ಮಾದರಿಯ ಆಕರ್ಷಕ ಉದ್ಯಾನವನ ನಿರ್ಮಾಣ ಮಾಡಿದರೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪ್ರವಾಸಿಗರಿಗೆ ಉಲ್ಲಾಸದ ತಾಣವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಬಹುಮುಖ್ಯವಾಗಿ ಗೈಡ್’ಗಳ ತರಬೇತಿಯಾಗಬೇಕು. ಕೇವಲ ಪ್ರವಾಸಿ ತಾಣಗಳ ಪಟ್ಟಿ ಒಪ್ಪಿಸುವ ಕೆಲಸ ಮಾಡುವುದರ ಬದಲಿಗೆ ಸ್ಥಳೀಯ ಇತಿಹಾಸ ಮತ್ತು ಗ್ರಾಮ ಮಟ್ಟದ ವೈಶಿಷ್ಟ್ಯಗಳ ಬಗ್ಗೆ ರಸವತ್ತಾಗಿ ಹೇಳುವ ಕೌಶಲ್ಯವನ್ನು ಅವರಲ್ಲಿ ಉದ್ದೀಪಿಸಬೇಕಿದೆ. ಈ ಸಲುವಾಗಿ ಕ್ಷಿಪ್ರ ಮಾಹಿತಿ ಕೋರ್ಸ್‌ಗಳನ್ನು ಅವರಿಗಾಗಿ ಏರ್ಪಡಿಸಬೇಕು. ಅದಕ್ಕೆಂದೇ ಮಾಹಿತಿ ಸೂಚಿಯನ್ನು ಸಿದ್ಧಪಡಿಸಬೇಕು. ಅಲ್ಲದೇ ಸಕ್ರೆಬೈಲಿನ ಆನೆ ಶಿಬಿರ ಈಗಾಗಲೇ ಜನಪ್ರಿಯಗೊಳ್ಳುತ್ತಿದೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಮಾತನಾಡಿ, ಮಲೆನಾಡಿನ ಆಹಾರ ಪದ್ಧತಿ ಕುರಿತ ಆಹಾರ ಮೇಳವೂ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. ಇಂತಹ ವಿಶಿಷ್ಟಗಳ ಬಗ್ಗೆ ಆಯಾ ಜಿಲ್ಲೆಗಳಲ್ಲೂ ಪ್ರಯತ್ನ ಮಾಡಬಹುದು. ಆಗುಂಬೆಯಲ್ಲಿ ಅನಾಥವಾಗಿರುವ ದಿವಾನ್ ಪೂರ್ಣಯ್ಯನವರ ಧರ್ಮಶಾಲೆ ಪಾರಂಪರಿಕ ಸೌಧವಾಗಿ ಪುನಾರೂಪಿತವಾಗಬೇಕಿದೆ. ಮೇಲ್ಛಾವಣಿಯಿಲ್ಲದೇ ವಿಕೃತಗೊಂಡಿದೆ. ಮಲೆನಾಡಿನ ಅಪರೂಪದ ಸಾಮಗ್ರಿಗಳ ವಸ್ತು ಸಂಗ್ರಹಾಲಯವಾಗಿ ಮಾಡಬಹುದು ಎಂದರು.

ಸದ್ಯ ಆಗುಂಬೆ ಗ್ರಾಮ ಪಂಚಾಯತ್ ಅಪರೂಪದ ವನೌಷಧೀಯ ಸಸ್ಯೋದ್ಯಾನ ಬೆಳೆಸಿ ಪ್ರವಾಸಿಗರ ಗಮನ ಸೆಳೆದಿದೆ. ಅಲ್ಲಿ ಸೂಕ್ತ ಪ್ರವಾಸೀ ಆಕರ್ಷಣೆಗಳ ಕೆಲಸವಾಗಬೇಕು ಎಂದು ಎಲ್ಲರ ಗಮನ ಸೆಳೆದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್, ಕಾರ್ಯದರ್ಶಿ, ಉಪಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(ವರದಿ: ಡಾ.ಸುಧೀಂದ್ರ)

Tags: AgumbeB S yeddyurappaKannada NewsKarnataka TourismShivamoggatourism developmentಪ್ರವಾಸೋದ್ಯಮಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಸುಧಾಮೂರ್ತಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ: ವಿದ್ಯಾರ್ಥಿಗಳ ಶಿಸ್ತು ಕಲಿಕೆಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅವಶ್ಯಕ

Next Post

ಭದ್ರಾವತಿ: ನಗರಸಭೆ ಎಲ್ಲಾ ವಾರ್ಡುಗಳಿಗೂ ಶುದ್ದ ನೀರು ಕ್ರಮಕ್ಕೆ ಮುಂದಾಗಲಿ: ವೇಣುಗೋಪಾಲ್

kalpa News

kalpa News

Next Post
ಭದ್ರಾವತಿ: ನಗರಸಭೆ ಎಲ್ಲಾ ವಾರ್ಡುಗಳಿಗೂ ಶುದ್ದ ನೀರು ಕ್ರಮಕ್ಕೆ ಮುಂದಾಗಲಿ: ವೇಣುಗೋಪಾಲ್

ಭದ್ರಾವತಿ: ನಗರಸಭೆ ಎಲ್ಲಾ ವಾರ್ಡುಗಳಿಗೂ ಶುದ್ದ ನೀರು ಕ್ರಮಕ್ಕೆ ಮುಂದಾಗಲಿ: ವೇಣುಗೋಪಾಲ್

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!