ಕಲ್ಪ ಮೀಡಿಯಾ ಹೌಸ್ | ಬರಹ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಭರತನಾಟ್ಯವು ಕೇವಲ ನೃತ್ಯಕಲೆ ಮಾತ್ರವಲ್ಲ, ಅದು ಭಕ್ತಿ, ಶಿಸ್ತು, ತಾಳ್ಮೆ ಮತ್ತು ಆತ್ಮಸಮರ್ಪಣೆಯ ಜೀವಂತ ರೂಪ. ಇಂತಹ ಒಂದು ರೂಪವಾಗಿ ಮೈದಳಿದ ಅಪ್ರತಿಮ ಕಲಾವಿದೆ ತುಳುನಾಡು ಚೆರ್ಕಾಡಿಯ ದೀಕ್ಷಾ.
ಬೆಲೆ ಕಟ್ಟಲು ಸಾಧ್ಯವೇ ಈ ಪ್ರತಿಭೆಯ ಛಲಕ್ಕೆ ಸಾಧನೆ ಎಂಬುದು ಒಂದು ತಪಸ್ಸು ಇದ್ದಹಾಗೆ. ಸುಲಭಕ್ಕೆ ದಕ್ಕುವ ವಿಷಯವಲ್ಲ. ನಮ್ಮ ವಿದುಷಿ ದೀಕ್ಷಾ ಅವರು 9 ದಿನಗಳ ಕಾಲ ನಿರಂತರವಾಗಿ ಭರತನಾಟ್ಯ ಮಾಡುತ್ತೇನೆ ಎಂದಾಗ ಎಲ್ಲರೂ ಬೆರಗಾದರು. ಆದರೆ, ಆಕೆಯಲ್ಲಿದ್ದ ಅಚಲ ಆತ್ಮವಿಶ್ವಾಸ, ಶ್ರದ್ಧೆ, ನಂಬಿಕೆ ಈಗ ಆಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದಿದೆ.
ಕಲೆಗಾಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಈಗಾಗಲೇ 170 ಗಂಟೆಗಳ ದಾಖಲೆಯನ್ನು ದಾಟಿ, ಮುಂದಿನ 216 ಗಂಟೆಗಳ ಮಹತ್ತರ ಗುರಿಯತ್ತ ನಿರಂತರವಾಗಿ ಸಾಗುತ್ತಿರುವ ಅವರ ಪ್ರಯತ್ನ ನಿಜಕ್ಕೂ ವಿಶ್ವದ ಗಮನ ಸೆಳೆಯುವಂಥದ್ದು.ಅವರು ಮಾಡುತ್ತಿರುವ ಈ ಸಾಧನೆ ಕೇವಲ ದೇಹದ ಶಕ್ತಿಯ ಫಲವಲ್ಲ; ಅದು ಮನಸ್ಸಿನ ಧೈರ್ಯ, ಹೃದಯದ ಭಕ್ತಿ ಮತ್ತು ಕಲೆಯ ಮೇಲಿನ ಅಪ್ರತಿಮ ಪ್ರೀತಿಯ ಫಲ. ಪ್ರತಿಯೊಂದು ನೃತ್ಯಹೆಜ್ಜೆಯೂ ಒಂದು ತಪಸ್ಸಿನಂತಿದೆ, ಪ್ರತಿಯೊಂದು ಭಾವಪ್ರಕಟನೆಯೂ ಒಂದು ಯಜ್ಞದಂತಿದೆ. ಇನ್ನೂ ಎರಡು ದಿನಗಳು ಬಾಕಿ ಇರುವಾಗಲೂ ಅವರೂ ಅಚಲ ಮನೋಬಲದೊಂದಿಗೆ ನೃತ್ಯದ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರಿಗೂ ಪ್ರೇರಣೆ.
ಈ ಸಾಧನೆ ಒಂದು ದಾಖಲೆಯನ್ನು ಮುರಿಯುವಷ್ಟರಲ್ಲಿ ಸೀಮಿತವಾಗಿಲ್ಲ. ಅದು ಭವಿಷ್ಯದ ಪೀಳಿಗೆಗಳಿಗೆ ಮಾರ್ಗದರ್ಶಕ ದೀಪವಾಗುವುದು. ಕಲೆಗೆ ತಲೆಬಾಗುವವರು ಎಷ್ಟು ಶಕ್ತಿಶಾಲಿಗಳಾಗಬಹುದು ಎಂಬುದಕ್ಕೆ ಅವರೇ ಸಾಕ್ಷಿ.
ಅವರ ಪರಿಶ್ರಮಕ್ಕೆ ತಲೆಬಾಗುತ್ತಾ, ಈ ಅನನ್ಯ ಸಾಧನೆಗೆ ಹೃದಯಪೂರ್ವಕ ಗೌರವ ಸಲ್ಲಿಸುತ್ತೇವೆ. ಅವರ ಈ ಸಾಧನೆಯಿಂದ ಭರತನಾಟ್ಯಕಲೆಗೂ, ನಮ್ಮ ಸಮಾಜಕ್ಕೂ, ಭವಿಷ್ಯ ಪೀಳಿಗೆಗಳಿಗೂ ಅನನ್ಯವಾದ ಸ್ಪೂರ್ತಿ ದೊರೆಯುತ್ತದೆ.
ಅಭಿನಂದನೆಗಳು ದೀಕ್ಷಾ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post