ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ಜವಾಹರಲಾಲ್ ನೆಹರು Jawaharlal Nehru ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿದ್ದು, ಇಂತಹ ನಾಯಕರ ಫೋಟೋವನ್ನು ಮಧ್ಯಪ್ರದೇಶದ ವಿಧಾನಸಭೆಯಿಂದ ತೆಗೆದಿರುವುದು ವಿಷಾದನೀಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಮಾಜಿ ಸಿಎಂ ದಿಗ್ವಿಜಯ ಸಿಂಗ್ Digvijay Singh ಅವರ ಪುತ್ರ ಜೈವರ್ಧನ್ ಸಿಂಗ್ Jaivardhan Singh ಆರೋಪಿಸಿದ್ದು, ಸದನದಿಂದ ನೆಹರು ಫೋಟೋ ತೆಗೆದಿರುವುದು ವಿಷಾದನೀಯ. ಒಂದಾಗಿದ್ದ ಭಾರತ ಮತ್ತು ಪಾಕಿಸ್ತಾನಕ್ಕೆ ಒಟ್ಟಿಗೆ ಸ್ವಾತಂತ್ರ ಸಿಕ್ಕಿದೆ. ಆದರೆ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜವಾಹರಲಾಲ್ ನೆಹರು ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿದೆ. ಬಿಜೆಪಿ ಅಥವಾ ಬೇರೆ ಯಾರೇ ನೆಹರು ಫೋಟೋ ತೆಗೆದರೂ ಅದು ತಪ್ಪಾಗುತ್ತದೆ. ನಾನು ಹಂಗಾಮಿ ಸ್ಪೀಕರ್ ಜೊತೆ ಚರ್ಚಿಸುತ್ತೇನೆ ಎಂದು ಜೈವರ್ಧನ್ ಸಿಂಗ್ ತಿಳಿಸಿದ್ದಾರೆ.











Discussion about this post