ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ಜವಾಹರಲಾಲ್ ನೆಹರು Jawaharlal Nehru ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿದ್ದು, ಇಂತಹ ನಾಯಕರ ಫೋಟೋವನ್ನು ಮಧ್ಯಪ್ರದೇಶದ ವಿಧಾನಸಭೆಯಿಂದ ತೆಗೆದಿರುವುದು ವಿಷಾದನೀಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಮಾಜಿ ಸಿಎಂ ದಿಗ್ವಿಜಯ ಸಿಂಗ್ Digvijay Singh ಅವರ ಪುತ್ರ ಜೈವರ್ಧನ್ ಸಿಂಗ್ Jaivardhan Singh ಆರೋಪಿಸಿದ್ದು, ಸದನದಿಂದ ನೆಹರು ಫೋಟೋ ತೆಗೆದಿರುವುದು ವಿಷಾದನೀಯ. ಒಂದಾಗಿದ್ದ ಭಾರತ ಮತ್ತು ಪಾಕಿಸ್ತಾನಕ್ಕೆ ಒಟ್ಟಿಗೆ ಸ್ವಾತಂತ್ರ ಸಿಕ್ಕಿದೆ. ಆದರೆ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜವಾಹರಲಾಲ್ ನೆಹರು ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿದೆ. ಬಿಜೆಪಿ ಅಥವಾ ಬೇರೆ ಯಾರೇ ನೆಹರು ಫೋಟೋ ತೆಗೆದರೂ ಅದು ತಪ್ಪಾಗುತ್ತದೆ. ನಾನು ಹಂಗಾಮಿ ಸ್ಪೀಕರ್ ಜೊತೆ ಚರ್ಚಿಸುತ್ತೇನೆ ಎಂದು ಜೈವರ್ಧನ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಸ್, ಮಧ್ಯಪ್ರದೇಶ ವಿಧಾನಸಭೆಯಿಂದ ನೆಹರು ಅವರ ಭಾವಚಿತ್ರವನ್ನು ತೆಗೆದುಹಾಕಿರುವುದನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ದುರಾದೃಷ್ಟಕರ. ಇತಿಹಾಸ ಅಳಿಸಲು ಬಿಜೆಪಿ ಹಗಲಿರುಳು ಶ್ರಮಿಸುತ್ತಿದೆ. ದಶಕಗಳ ಕಾಲ ವಿಧಾನಸಭೆಯಲ್ಲಿದ್ದ ದೇಶದ ಮೊದಲ ಪ್ರಧಾನಿ ಭಾವಚಿತ್ರವನ್ನು ಬಿಜೆಪಿ ತೆಗೆದಿದೆ. ಇದು ಬಿಜೆಪಿ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post