ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ, ಪೂರ್ವ ಕರಾವಳಿ ರೈಲ್ವೆಯು ಭುವನೇಶ್ವರದಿಂದ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಸಂಚಾರ ನಡೆಸಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಈ ಕುರಿತ ವಿವರಗಳು ಹೀಗಿವೆ.
08401 ಸಂಖ್ಯೆಯ ಭುವನೇಶ್ವರ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 25 ಜೂನ್ 2026 ರಂದು 11:00 ಗಂಟೆಗೆ ಭುವನೇಶ್ವರದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದ್ದು, ಮರುದಿನ 15:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ರೈಲು ತನ್ನ ಮಾರ್ಗ ಮಧ್ಯೆ ಖುರ್ದಾ ರೋಡ್, ಬಾಳುಗಾಂವ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರೋಡ್, ವಿಜಯನಗರಂ, ದುವ್ವಾಡ, ಸಮಲ್ಕೋಟ್, ರಾಜಮಂಡ್ರಿ, ವಿಜಯವಾಡ, ಓಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟಾ, ಕಟಪಾಡಿ, ಜೋಲಾರ್ಪೆಟೈ, ಕುಪ್ಪಂ, ಬಂಗಾರಪೇಟೆ, ವೈಲ್ಟ್ ಫೀಲ್ಡ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
Also read: ಮನೆಯಲ್ಲಿ ಮಲಗಿದ್ದಾಗಲೇ ಕಳ್ಳತನಕ್ಕೆ ಯತ್ನ | ಸಿಸಿಟಿವಿ ಒಡೆದು ಬಾಗಿಲು ಮುರಿಯಲು ಯತ್ನ
ಎಷ್ಟು ಬೋಗಿಗಳು ಇರಲಿವೆ?
ಒಟ್ಟು 16 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ 7 ಎಸಿ ತ್ರೀ ಟೈರ್ ಬೋಗಿಗಳು, 7 ಎಸಿ ತ್ರೀ ಟೈರ್ ಎಕಾನಮಿ ಬೋಗಿಗಳು ಹಾಗೂ ಜನರೇಟರ್ ಕಾರ್ ಒಳಗೊಂಡ 2 ಲಗೇಜ್ ಮತ್ತು ಬ್ರೇಕ್ ವ್ಯಾನ್’ಗಳುಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















