Read - < 1 minute
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋವಿಡ್ ಸೋಂಕು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೊಸ ಕಠಿಣ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಯಮಾವಳಿಗಳು ಹೀಗಿವೆ:
ಯಾವುದಕ್ಕೆ ನಿರ್ಬಂಧ?
- ಶುಕ್ರವಾರದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ
- ಬೆಂಗಳೂರಿನಲ್ಲಿ 1ರಿಂದ 9ನೆಯ ತರಗತಿಗಳು ರದ್ದು
- ಬೆಂಗಳೂರಿನಲ್ಲಿ ಎಸ್’ಎಸ್’ಎಲ್’ಸಿ, ಪಿಯುಸಿ, ಮೆಡಿಕಲ್ ಹೊರತಾಗಿ ಎಲ್ಲ ಕಾಲೇಜುಗಳು ಬಂದ್
- ರ್ಯಾಲಿ, ಜಾತ್ರೆ, ಪಾದಯಾತ್ರೆಗಳಿಗೆ ಅವಕಾಶವಿಲ್ಲ
- ದೇಗುಲಗಳಲ್ಲಿ ದರ್ಶನಕ್ಕೆ 50 ಜನರಿಗೆ ಮಾತ್ರ ಅವಕಾಶ
- ಬಾರ್ ಹಾಗೂ ಪಬ್’ಗಳಲ್ಲಿ 50:50ಕ್ಕೆ ಅವಕಾಶ
- ಪಾರ್ಕ್ ವೀಕೆಂಡ್ ಪಾರ್ಟಿಗಳು ಬಂದ್
- ಥೀಯೇಟರ್, ಮಾಲ್ ಸೇರಿ ಎಲ್ಲವೂ ವೀಕೆಂಡ್ ಕರ್ಫ್ಯೂ ವೇಳೆ ಬಂದ್
- ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ವಿಸ್ತರಣೆ
- ವಿದೇಶದಿಂದ ಬರುವವರಿಗೆ ಆರ್’ಟಿಪಿಸಿಆರ್ ನೆಗೆಟಿವ್ ಕಡ್ಡಾಯ
ಯಾವುದಕ್ಕೆ ಅವಕಾಶ?
- ವೀಕೆಂಡ್ ಕರ್ಫ್ಯೂ ವೇಳೆ ಸಾರಿಗೆ ಸಂಚಾರಕ್ಕೆ ಅವಕಾಶ
- ಮಾಲ್, ಸಿನಿಮಾ ಮಂದಿರಗಳಲ್ಲಿ 50:50ಗೆ ಅವಕಾಶ
- ಮಾಲ್, ಥಿಯೇಟರ್’ಗೆ ಹೋಗುವವರಿಗೆ 2 ಡೋಸ್ ಲಸಿಕೆ ಕಡ್ಡಾಯ
- ಮದುವೆ ಮನೆಗಳಿಗೆ 200 ಜನರ ಮಿತಿ
- ಒಳಾಂಗಣ ಸಮಾರಂಭಗಳಿಗೆ 100 ಜನರ ಮಿತಿ
- ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅನುಮತಿ
- ಅಗತ್ಯ ಹಾಗೂ ತುರ್ತು ಸೇವೆಗಳಿಗೆ 24/7 ಅವಕಾಶ
- ಹೊಟೇಲ್’ಗಳಲ್ಲಿ ಪಾರ್ಸಲ್’ಗೆ ಮಾತ್ರ ಅವಕಾಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post