ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ವಿಜಯಪುರ |
ಕರ್ನಾಟಕ ಸೇರಿದಂತೆ ದೇಶದ ಕೆಲವು ಪ್ರದೇಶ ಸೇರಿ ಹಲವು ಕಡೆಗಳಲ್ಲಿ ಬಾಂಬ್ #Bomb ಸ್ಪೋಟಿಸುವ ಬೆದರಿಕೆ ಬಂದಿದ್ದು, ಆನಂತರ ಇವು ಹುಸಿ ಕರೆ ಎಂದು ತಿಳಿದುಬಂದಿದೆ.
ವರದಿಗಳಂತೆ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಜಿಯಂ, ನ್ಯಾಶನಲ್ ಗಾಂಧಿ ಮ್ಯೂಜಿಯಂ #NationalGandhiMuseum ಸೂರತ್ ಮುನ್ಸಿಪಲ್ ಸೈನ್ಸ್ ಸೆಂಟರ್, ಗೋವಾ #Goa ಸೈನ್ಸ ಸೆಂಟರ್ ಸೇರಿದಂತೆ ಗೋವಾ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ರಾತಾಲಯಗಳು, ಸರ್ಕಾರಿ ಸ್ವಾಮ್ಯದ ಮ್ಯೂಜಿಯಂ, ಪ್ರವಾಸಿ ತಾಣಗಳಲ್ಲಿರುವ ಮ್ಯೂಜಿಯಂಗಳಿಗೆ ಸ್ಪೋಟದ ಬೆದರಿಕೆ ಬಂದಿದೆ.
ಈ ಸಂಸ್ಥೆಗಳ ಇಮೇಲ್’ಗಳಿಗೆ #Email ಬೆದರಿಕೆ ಸಂದೇಗಳು ಬಂದಿದ್ದು, ಪರಿಶೀಲನೆ ನಂತರ ಇವು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.
ಇನ್ನು, ವಿಜಯಪುರದ #Vijayapura ಗೋಳಗುಮ್ಮಟ ಸ್ಮಾರಕ ಕಚೇರಿಗೂ ಇದೇ ರೀತಿಯ ಬೆದರಿಕೆ ಇಮೇಲ್ ಬಂದಿದೆ ಎಂದು ವರದಿಯಾಗಿದೆ.
ಕಿಡಿಗೇಡಿಗಳು ಗೋಳಗುಮ್ಮಟ ಮುಂದೆ ಇರುವ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಮ್ಯೂಜಿಯಂನ ಹಲವು ಜಾಗಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಟೆರರೈಸರ್ಸ್ ಗ್ರೂಪ್ ಹೆಸರಲ್ಲಿ ಇ-ಮೇಲ್ ಬಂದ ಸಂದೇಶ ಗೋಳಗುಮ್ಮಟ ಸಿಬ್ಬಂದಿಗಳು ವೀಕ್ಷಿಸಿದ್ದಾರೆ.
ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಲಾಗಿದೆ. ಇನ್ನೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಇದೊಂದು ಹುಸಿ ಬಾಂಬ್ ಕರೆ ಎನ್ನುವುದು ಪೊಲೀಸರು ಖಚಿತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















