ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ನಿರ್ಧಾರವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನನಗೀಗ 77 ವರ್ಷ. ಮುಂದಿನ ಚುನಾವಣೆ ವೇಳೆಗೆ 82 ವರ್ಷ ಆಗಿರುತ್ತದೆ. ಆಗ ಅಷ್ಟೊಂದು ಲವಲವಿಕೆಯಿಂದ ಇರಲು ಆಗುವುದಿಲ್ಲ. ಹೀಗಾಗಿ, ಮುಂದಿನ ಚುನಾವಣೆಯಿಂದ ಸ್ಪರ್ಧೆ ಮಾಡಬಾರದು ಎಂದು ನಿರ್ಧರಿಸಿದ್ದೇನೆ ಎಂದರು.
Also read: ಅಮಿತ್ ಶಾ ಬುಲಾವ್ | ನಾಳೆ ದೆಹಲಿಗೆ ಈಶ್ವರಪ್ಪ | ಕುತೂಹಲ ಘಟ್ಟಕ್ಕೆ ಬೆಳವಣಿಗೆ
ನಾನು ರಾಜಕೀಯಕ್ಕೆ ಬಂದು 50 ವರ್ಷವಾಯಿತು. ತಳ ಹಂತದಿAದ ಇಲ್ಲಿಯವರೆಗೂ ಬಂದಿದ್ದೇನೆ. ವಯಸ್ಸಿಗೆ ಅನುಗುಣವಾಗಿ ನನ್ನ ದೇಹ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post