ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೈಂಗಿಕ ಕಿರುಕುಳ #SexualHarassment ಹಾಗೂ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ #PrajwalRevanna ಅವರು ಇಂದು ಕೊನೆಗೂ ಬೆಂಗಳೂರಿಗೆ ಬಂದಿದ್ದು, ಅವರು ಏರ್ ಪೋರ್ಟ್’ನಲ್ಲೇ ಬಂಧಿಸಲಾಗಿದೆ.
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಜರ್ಮನಿಯಲ್ಲಿ #Germany ತಂಗಿದ್ದ ಪ್ರಜ್ವಲ್ ರೇವಣ್ಣ ಇಂದು ಮ್ಯೂನಿಚ್’ನಿಂದ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನದ ಮೂಲಕ ಸುಮಾರು 12.35ರ ವೇಳೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
12:35ರ ವೇಳೆಗೆ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು. ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ಸಿಐಎಸ್‌ಎಫ್ ಸಿಬ್ಬಂದಿ ವಿಮಾನವನ್ನು ಸುತ್ತುವರಿದಿದ್ದರು.
ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೊಟೀಸ್ ಹಾಗೂ ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ವಿಮಾನ ದ್ವಾರದಲ್ಲೇ ಸಿಐಎಸ್’ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದು, ಇಮಿಗ್ರೇಷನ್ ಕಚೇರಿಗೆ ಕರೆದೊಯ್ದರು. ಆನಂತರ ನಿಯಮಾವಳಿಗಳ ಪೂರ್ಣದ ನಂತರ ಎಸ್’ಐಟಿ ಅಧಿಕಾರಿಗಳ ವಶಕ್ಕೆ ಹಸ್ತಾಂತರ ಮಾಡಲಾಗಿದೆ.
ಟರ್ಮಿನಲ್ 2ರಲ್ಲಿ ಇಮಿಗ್ರೇಷನ್ #Immigration ನಿಯಮಗಳನ್ನು ಪೂರೈಸಿದ ನಂತರ ಪ್ರಜ್ವಲ್ ಅವರನ್ನು ಅಧಿಕಾರಿಗಳು ಎಸ್’ಐಟಿ #SIT ತಂಡದ ವಶಕ್ಕೆ ಹಸ್ತಾಂತರ ಮಾಡಿದ್ದಾರೆ. ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರೆಂಟ್ ಹಾಗೂ ಲುಕ್ ಔಟ್ ನೋಟೀಸ್ ಸಹ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅವರನ್ನು ನೇರವಾಗಿ ಎಸ್’ಐಟಿ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಪ್ರಜ್ವಲ್ ಆಗಮನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹಾಗೂ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಟರ್ಮಿನಲ್ 2ರಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿತ್ತು. ಟರ್ಮಿನಲ್ 2ಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳಿಗೆ ಬ್ಯಾರಿಕೇಟ್ ಅಳವಡಿಸಲಾಗಿದ್ದು, ಹೊರಬರುವ ಗೇಟ್ ಬಳಿಯಲ್ಲಿ ಭದ್ರತಾ ಸರ್ಪಗಾವಲು ಹಾಕಲಾಗಿತ್ತು.
ಎಸ್’ಐಟಿ ಕಚೇರಿಗೆ ಪೊಲೀಸ್ ಸರ್ಪಗಾವಲು
ಇನ್ನು, ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ರಾತ್ರಿಯೇ ಸಿಐಡಿ #CID ಕಚೇರಿ ಆವರಣದಲ್ಲೇ ಇರುವ ಎಸ್’ಐಟಿ ಕಚೇರಿಗೆ ಕರೆದೊಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ 2 ಕೆಎಸ್’ಆರ್’ಪಿ #KSRP ತುಕಡಿ, 50ಕ್ಕೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ಹಂತದ ಭದ್ರತೆ ಕಲ್ಪಿಸಲಾಗಿದೆ.
ಇದರೊಂದಿಗೆ ಪ್ರಜ್ವಲ್ ಕಾರ್ಯಕರ್ತರು ಅಥವಾ ಅಭಿಮಾನಿಗಳು ಜಮಾಯಿಸಿ, ಏನಾದರೂ ಪರಿಸ್ಥಿತಿ ಬದಲಾದರೆ ಅವಶ್ಯಕತೆ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ 2 ಬಿಎಂಟಿಸಿ #BMTC ಬಸ್’ಗಳನ್ನೂ ಸಹ ಸ್ಥಳದಲ್ಲಿ ಕಾದಿರಿಸಲಾಗಿದೆ.
ನಾಳೆ ನ್ಯಾಯಾಲಯಕ್ಕೆ ಹಾಜರು?
ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎಸ್’ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post