ಮುಂಬೈ: ಬಿಸಿಲಿನಿಂದ ಕಂಗೆಟ್ಟಿದ್ದ ವಾಣಿಜ್ಯ ನಗರಿ ಮುಂಬೈ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತತ್ತರಿಸಿ ಹೋಗಿದ್ದು, ಇಡಿಯ ನಗರದ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿದೆ.
Mumbai Airport PRO: SpiceJet SG 6237 Jaipur-Mumbai flight overshot runway yesterday while landing at Mumbai Airport. All passengers are safe, no injuries reported. #Maharashtra pic.twitter.com/hEULogZHr4
— ANI (@ANI) July 2, 2019
ಭಾರೀ ಮಳೆ ಸುರಿದ ಪರಿಣಾಮ ನಗರದ ಬಹುತೇಕ ಜನವಸತಿ ಬಡಾವಣೆಗಳು ಜಲಾವೃತಗೊಂಡಿದ್ದು, ಪೂರ್ವ ಕುರ್ಲಾದ ಕೈಲಾಶ್ ಪರ್ಬಾತ್ ಸೊಸೈಟಿ ಅಪಾರ್ಟ್‌ಮೆಂಟ್’ನ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದೆ.
#MumbaiRains : Ground floor of Kailash Parbat Society in Kurla East submerged, after intense spell of rain in the area. pic.twitter.com/x8xFtwxAt8
— ANI (@ANI) July 2, 2019
ಇದರೊಂದಿಗೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ.
ಮುಂಬೈನ ಹಲವು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 200 ಎಂಎಂಗೂ ಅಧಿಕ ಮಳೆಯಾಗಿದ್ದು, ಇದು ಬುಧವಾರದವರೆಗೂ ಮುಂದುವರೆಯುವ ಜೊತೆಯಲ್ಲಿ ಮಳೆ ಪ್ರಮಾಣವೂ ಸಹ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
#MumbaiRains : Waterlogged streets in King Circle area, following heavy rainfall. pic.twitter.com/RnlTFC7Wah
— ANI (@ANI) July 2, 2019
ಇಂದು ಮುಂಜಾನೆ 11.45ರ ನಂತರ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಸಮುದ್ರ ತೀರಗಳಿಗೆ ಯಾರೂ ತೆರಳದಂತೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Mumbai: Traffic movement affected at Western Express Highway due to heavy rainfall in the city. #MumbaiRains pic.twitter.com/rak4iRl9Om
— ANI (@ANI) July 2, 2019
ಮಳೆಯಿಂದಾಗಿ ರೈಲ್ವೆ ಹಳಿ ಮುಚ್ಚಿ ಹೋಗಿರುವ ಪರಿಣಾಮ ಮುಂಬೈ-ಥಾಣೆ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
#MumbaiRains: Railway tracks submerge at Sion railway station, after heavy rains in the area. pic.twitter.com/BxqWp30ENU
— ANI (@ANI) July 2, 2019
Discussion about this post