ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧ್ಯರಾತ್ರಿಯೇ ಎರಡು ಕೊಲೆ ಕಂಡಿದ್ದ ಶಿವಮೊಗ್ಗ ಸರಹದ್ದಿನ ಸೀಗೆಹಟ್ಟಿಯಲ್ಲಿ ಈಗಷ್ಟೆ ಅಂದರೆ ರಾತ್ರಿ ಹತ್ತರ ಹೊತ್ತಿಗೆ ಮತ್ತೊಂದು ಮಾರಾಮಾರಿಯ ಕೊಲೆ ಕಂಡಿದೆ.
ಸೀಗೆಹಟ್ಟಿ ನಿವಾಸಿ ಎನ್ನಲಾದ ಹರ್ಷ ಎಂಬಾತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಈತ ಬಜರಂಗದಳದ ಕಾರ್ಯಕರ್ತನಾಗಿದ್ದ ಎಂದು ಹೇಳಲಾಗುತ್ತಿದೆ.

ಭಾರತೀ ಕಾಲೋನಿಯ ಕಾಮತ್ ಪೆಟ್ರೊಲ್ ಬಂಕ್ ಬಳಿ ಈ ಹತ್ಯೆ ನಡೆಸಿದ್ದಾರೆ.
ಈ ಕೊಲೆ ನಗರದ ಬಹುತೇಕ ಕಡೆ ತಲ್ಲಣ ಹುಟ್ಟಿಸಿದ್ದು ಬಸ್ ಸ್ಟಾಂಡ್ ಸೇರಿದಂತೆ ನಗರದ ಬಹುತೇಕ ಕಡೆ ಗಲಾಟೆಗೆ ಪೂರಕವೆಂಬಂತಹ ಚಿಕ್ಕಪುಟ್ಟ ಘಟನೆಗಳು ನಡೆದಿದ್ದು ಬಿಗಿ ಪೊಲೀಸ್ ಬಂದೂಬಸ್ತಿನಿಂದ ಶಿವಮೊಗ್ಗ ನಗರವನ್ನು ಪೊಲೀಸರು ಹದ್ದುಬಸ್ತಿನಲ್ಲಿಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗು ಜಿಲ್ಲಾ ಪೋಲಿಸ್ ವರಿಷ್ಠ ಲಕ್ಷ್ಮಿ ಪ್ರಸಾದ್ ಭೇಟಿ ನೀಡಿ ನಾಗರೀಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು.ಸೀಗೆಹಟ್ಟಿ ಯ ಹಲವು ಕಡೆ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ಪೋಲಿಸರು ಸಕಾಲಿಕ ಕ್ರಮ ಕೈಗೊಂಡಿದ್ದಾರೆ.
ಒಂದೆಡೆ ಹಿಜಾಬ್ ಗಲಾಟೆ ತಣ್ಣಗಾಗುವ ಸಂದರ್ಭದಲ್ಲಿ ಈ ಕೊಲೆ ನಡೆದಿರುವುದು ಪೋಲಿಸರ ನಿದ್ದೆಗೆಡುವಂತೆ ಮಾಡಿದೆ. ನಗರದ ಕಾನೂನು ಸುವ್ಯವಸ್ಥೆ ಯನ್ನು ಮತ್ತಷ್ಟು ಹದಗೆಡುವಂತೆ ಮಾಡಿದೆ ಎನ್ನಬಹುದು. ಈಗಾಗಲೇ ಹಿಂದೂಪರ ಸಂಘಟನೆಗಳು ಕೆಲವೆಡೆ ಸಾರ್ವಜನಿಕ ಆಸ್ತಿ ಪಾಸ್ತಿ ಗೆ ಹಾನಿ ಮಾಡಿದ್ದಾರೆ. ಪೋಲಿಸರು ಕೊಡ ಆಯ ಕಟ್ಟಿನ ಜಾಗದಲ್ಲಿ ಬಿಗಿ ಯಾದ ಬಂದೂಬಸ್ತ್ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















