ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ತಮ್ಮ 75ನೇ ವರ್ಷಕ್ಕೆ ನಿವೃತ್ತಿಯಾಗದೇ, ಅವರೇ ಪ್ರಧಾನಿಯಾಗಿ ಮುಂದುವರೆದು ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ #AmitShah ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ #AravindKejriwal ಅವರು ಮೋದಿ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಮಿತ್ ಶಾ ಸ್ಪಷ್ಟೀಕರಣ ನೀಡಿ ಟಕ್ಕರ್ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಹಾಗೂ ಇಂಡಿಯಾ ಬ್ಲಾಕ್’ಗೆ ನಾನು ಹೇಳಲು ಬಯಸುತ್ತೇನೆ. ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮ ಬಿಜೆಪಿಯ ಸಂವಿಧಾನದಲ್ಲಿ ಇಲ್ಲ ಎಂದಿದ್ದಾರೆ.
Also read: 75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು
ಮೋದಿ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ. ಮುಂದಿನ ಬಾರಿಯೂ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದು, ಈ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಜೈಲಿನಿಂದ ಬಿಡುಗಡೆಯಾದ ನಂತರ ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಇದೇ ವರ್ಷ ಸೆಪ್ಟೆಂಬರ್’ನಲ್ಲಿ ಪ್ರಧಾನಿ ಮೋದಿ ಅವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಪಕ್ಷದ ನಿಯಮದ ಪ್ರಕಾರ 75 ವರ್ಷ ತುಂಬಿದವರು ನಿವೃತ್ತಿಯಾಗಬೇಕು. ಅವರೇ 2014 ರಲ್ಲಿ ನಿಯಮ ಮಾಡಿದರು. ಹೀಗಾಗಿ ಮೋದಿ ಪ್ರಧಾನಿಯಾಗಿ ಮುಂದುವರೆಯಲು ಸಾಧ್ಯವಿಲ್ಲ. ಮೋದಿ ಬದಲು ಅಮಿತ್ ಶಾ ಪ್ರಧಾನಿಯಾಗುತ್ತಾರೆ. ಅಮಿತ್ ಶಾ ಪರವಾಗಿ ಮೋದಿ ಮತಯಾಚಿಸುತ್ತಿದ್ದಾರೆ ಎಂದು ಹೇಳಿದ್ದರು.
ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಬಾರದು. ಮಧ್ಯಂತರ ಜಾಮೀನು ಜೂನ್ 1 ರವರೆಗೆ ಮಾತ್ರ ನೀಡಲಾಗಿದ್ದು, ಜೂನ್ 2 ರಂದು ಅವರು ಶರಣಾಗಬೇಕು. ಅರವಿಂದ್ ಕೇಜ್ರಿವಾಲ್ ಇದನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಿದರೆ, ಕಾನೂನಿನ ಬಗ್ಗೆ ಅವರ ತಿಳುವಳಿಕೆ ದುರ್ಬಲವಾಗಿದೆ ಎಂದರ್ಥ ಅಂತಾ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post