ನವದೆಹಲಿ: ಬಂಕ್’ನಲ್ಲಿ ದೊರೆಯುವ ಪೆಟ್ರೋಲ್ ಹಾಗೂ ಡೀಸೆಲ್ ಇನ್ನು ಮುಂದೆ ಸೂಪರ್ ಮಾರ್ಕೆಟ್’ನಲ್ಲೂ ಸಹ ದೊರಯುವ ಸಾಧ್ಯತೆಯ ಕುರಿತಾಗಿ ಬೆಳವಣಿಗೆಗಳು ನಡೆದಿವೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಸಚಿವಾಲಯ ಇಂತಹ ಪ್ರಸ್ತಾವನೆಯೊಂದನ್ನು ಶೀಘ್ರ ಕೇಂದ್ರ ಸಂಪುಟದ ಮುಂದೆ ಮಂಡಿಸಲಿದೆ. ಈ ಪ್ರಸ್ತಾವನೆಯಂತೆ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್’ಗಳಲ್ಲೂ ಸಹ ಈ ತೈಲಗಳು ದೊರೆಯುವಂತೆ ಮಾಡುವುದು ಉದ್ದೇಶವಾಗಿದೆ ಎಂದು ವರದಿಯಾಗಿದೆ.
ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಔಟ್’ಲೆಟ್’ಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ.
Discussion about this post