ಚಂಡೀಘಡ: ಇಡಿಯ ದೇಶವೇ ಹೆಮ್ಮೆ ಪಡುವಂತೆ ವೀರ ಯೋಧ, ಲಾಂಗ್ವಾಲಾ ಯುದ್ದದ ಹೀರೋ ಬ್ರಿಗೇಡಿಯರ್(ನಿವೃತ್ತ) ಕುಲದೀಪ್ ಸಿಂಗ್ ಚಂದಪುರಿ ಇಂದು ವಿಧಿವಶರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ 78 ವರ್ಷದ ಸಿಂಗ್, ಚಂಡೀಘಡದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದು, ಇವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಬ್ರಿಗೇಡಿಯರ್ ಚಂದಪುರಿ ಅವರು 1962ರಲ್ಲಿ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್‌ನ 23ನೆಯ ಬೆಟಾಲಿಯನ್‌ಗೆ ಸೇರಿದ್ದರು. 1971ರಲ್ಲಿ ಪಾಕಿಸ್ಥಾನದ ವಿರುದ್ಧ ಲಾಂಗ್ವಾಲಾದಲ್ಲಿ ನಡೆದ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಲಾಂಗ್ವಾಲಾ ಹೀರೋ ಎಂದೇ ಖ್ಯಾತರಾಗಿದ್ದರು.
ಇವರ ವೀರತ್ವ, ಧೈರ್ಯ, ತ್ಯಾಗ ಹಾಗೂ ಸಾಹಸವನ್ನು ಗುರುತಿಸಿ ಬಹಳಷ್ಟು ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ. ಪ್ರಮುಖವಾಗಿ ಮಹಾವೀರ ಚಕ್ರ ಇವರ ಮುಡಿಗೇರಿದೆ.
(Photo courtesy: Twitter)
Discussion about this post