ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ರಾಜ್ಯದ ಜನತೆಗೆ ಗ್ಯಾರೆಂಟಿ ನೀಡಲು ಪರದಾಡುತ್ತಿರುವ ಸರ್ಕಾರ ಈಗ ಏಕಾಏಕಿ ಸರ್ಕಾರಿ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಿದ್ದು, ಜನವರಿ 5ರಿಂದಲೇ ಜಾರಿಗೆ ಬರಲಿದೆ.
ಭಾನುವಾರದಿಂದಲೇ ನೂತನ ಪ್ರಯಾಣ ದರ ಅನ್ವಯವಾಗಲಿದ್ದು, ಕೆಎಸ್’ಆರ್’ಟಿಸಿ #KSRTC ಬಿಎಂಟಿಸಿ #BMTC ಹಾಗೂ ವಿವಿಧ ಬಸ್ ನಿಗಮಗಳ ದರವೂ ಸಹ ಏರಿಕೆಯಾಗಲಿದೆ.
Also Read>> ಬೌದ್ಧಿಕ ದಿವಾಳಿಯಾಗಿರುವ ಬಿಜೆಪಿ : ಜಮೀರ್ ಅಹಮದ್ ಖಾನ್ ಆಕ್ರೋಶ
ಈಗಾಗಲೇ ದರ ಏರಿಕೆ ಆದೇಶದ ಕುರಿತಾಗಿ ಸಚಿವ ಸಂಪುಟದ ನಿರ್ಣಯದ ಪ್ರತಿಯನ್ನು ಎಲ್ಲ ನಿಗಮಗಳಿಗೆ ರವಾನೆ ಮಾಡಲಾಗಿದ್ದು, ದರ ಏರಿಕೆಯ ಲೆಕ್ಕಾಚಾರದ ಕುರಿತಾಗಿ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ರಾಜ್ಯದ ನಾಲ್ಕು ನಿಗಮಗಳಿಗೂ ಶೇ.15 ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಪ್ರತಿ ಸ್ಟೇಜ್’ಗೆ ಎಷ್ಟು ದರ ಜಾಸ್ತಿ ಮಾಡಬೇಕು ಎಂದು ನಿಗಮಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ದಿವಾಳಿಯಾಗಿರುವ ಸಾರಿಗೆ ನಿಗಮಗಳಿಗೆ ಇದು ಬೂಸ್ಟರ್ ಡೋಸ್ ರೀತಿ ಕೆಲಸ ಮಾಡಲಿದೆ. ಇನ್ನು ಡೀಸೆಲ್, ಬಿಡಿಭಾಗಗಳಿಗೆ ದುಡ್ಡು ಇಲ್ಲದೆ ಪರದಾಡುತ್ತಿದ್ದ ಸಾರಿಗೆ ನಿಗಮಗಳು, ಶಕ್ತಿ ಯೋಜನೆ ಬಳಿಕವೂ ನಷ್ಟದಿಂದ ಹೊರಬರಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಇದೀಗ ಕೊನೆಗೂ 4 ನಿಗಮಗಳ ಬಸ್ ಪ್ರಯಾಣ ದರ ಏರಿಕೆಗೆ ಹಸಿರು ನಿಶಾನೆ ಸಿಕ್ಕಿದೆ.
ಬೆಂಗಳೂರಿನಿಂದ ಯಾವ ಪ್ರಮುಖ ನಗರಕ್ಕೆ ಎಷ್ಟು ಏರಿಕೆ?
- ಬೆಂಗಳೂರು- ಶಿವಮೊಗ್ಗ 375 ರೂ. 52 ರೂ.(ಏರಿಕೆ) 427 ರೂ.
- ಬೆಂಗಳೂರು- ಮೈಸೂರು 170 ರೂ. 27 ರೂ.(ಏರಿಕೆ) 197 ರೂ.
- ಬೆಂಗಳೂರು- ಹಾಸನ 238 ರೂ. 36 ರೂ.(ಏರಿಕೆ) 274 ರೂ.
- ಬೆಂಗಳೂರು- ಬಳ್ಳಾರಿ 385 ರೂ. 56 ರೂ.(ಏರಿಕೆ) 441 ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post