ಕಲ್ಪ ಮೀಡಿಯಾ ಹೌಸ್ | ಬೈಂದೂರು |
ನಮ್ಮ ಪಕ್ಷದ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ವಂಡ್ಸೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ಅವಿನಾಶ್ ಮತ್ತವರ ಬಳಗದವರು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ವಂಡ್ಸೆ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅವಿನಾಶ್ ಮೊಗವೀರ, ರಾಜೇಶ್ ಕಾಂಚನ್, ರಾಜೇಶ್ ಹಕ್ಲಮನೆ, ಶೈಲೇಶ್ ಪೂಜಾರಿ, ಕೃಷ್ಣ ಪೂಜಾರಿ, ಗೋವಿಂದ ಪೂಜಾರಿ ಏಳುಮುಡಿ ಮನೆ, ಹನೀಫ್ ಸಾಹೇಬ್ ವಂಡ್ಸೆ, ಗಣೇಶ್ ಪೂಜಾರಿ ಏಳುಮುಡಿ ಮನೆ, ಸುಧೀರ, ಕಿರಣ್ ಇನ್ನಿತರರು ಇದೇ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಇವರೆಲ್ಲರ ಆಗಮನದಿಂದ ಅಭಿವೃದ್ಧಿಯನ್ನು ಜನ ಸಂತೋಷದಿಂದ ಸ್ವೀಕರಿಸುತ್ತಾರೆ ಎಂದು ಮನದಟ್ಟಾಯ್ತು ಮತ್ತು ವಂಡ್ಸೆ ಭಾಗದಲ್ಲಿ ಬಿಜೆಪಿ ಪಕ್ಷದ ಬಲಹೆಚ್ಚಿತು. ವಂಡ್ಸೆ ಗ್ರಾಮ ಪಂಚಾಯತ್‌ನ 7 ಸದಸ್ಯರ ಪೈಕಿ 4 ಸದಸ್ಯರು ಭಾರತೀಯ ಜನತಾ ಪಾರ್ಟಿ ಸದಸ್ಯರೆನ್ನುವುದು ಸಂತೋಷದ ವಿಷಯ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post