ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕು ಕಚೇರಿಗೆ ವಿವಿಧ ದಾಖಲೆ ಪತ್ರಗಳನ್ನು ಪಡೆಯಲು ಬರುವ ಸಾರ್ವಜನಿಕರು ಮೂಲ ದಾಖಲೆಗಳನ್ನು ತಾವೇ ತಿದ್ದಬಾರದು ಮತ್ತು ಕೆಲಸ ನಿಮಿತ್ತ ಸಾರ್ವಜನಿಕರು ದಿನ ಅಲೆದಾಡುವುದನ್ನು ತಪ್ಪಿಸಿ ಅವರು ಕೆಲಸಗಳನ್ನು ಬೇಗನೆ ಮಾಡಿಕೊಡಿ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜನ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಆಯೋಜಿಸಿದ್ದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಕಾಲದಲ್ಲಿ ಒಟ್ಟು 41 ಸೇವಗಳು ಜನರಿಗೆ ತ್ವರಿತವಾಗಿ ತಲುಪಿಸುವಂತಾಗಬೇಕು. ಸರ್ಕಾರ ಮತ್ತು ಸಂವಿಧಾನದ ಪ್ರಮುಖ ಆಶಯ ಸಮಾಜದ ವಯೋವೃದ್ದ, ವಿಧವೆ, ಅಂಗವಿಕಲ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿಯ ಅರ್ಹ ಪಲಾನುಭವಿಗಳಿಗೆ ಸರ್ಕಾರದ ಸೌಕರ್ಯಗಳನ್ನು ಪಡೆಯಲು ಎಲ್ಲಾ ರೀತಿಯ ಪೂರಕ ದಾಖಲೆಗಳನ್ನು ಸಕಾಲಕ್ಕೆ ನೀಡುವುದಾಗಿದೆ. ನಾಗರೀಕರಿಗೆ ಸೇವೆಗಳನ್ನು ಪಡೆಯಲು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರವಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಉಪಯುಕ್ತ ದಾಖಲೆ, ಸೌಲಭ್ಯಗಳನ್ನು ಪಡೆಯಲು ಈಗ ಕೇವಲ 45 ದಿನಗಳ ಕಾಲಾವಧಿಯನ್ನು ಸರ್ಕಾರ ನೀಡಿದೆ. ಒಂದು ವಾರಗಳ ಕಾಲ ಸಾರ್ವಜನಿಕರಿಗೆ ಅರಿವು ಮೂಡಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿದೆ. ಸರ್ಕಾರದ ನಿರ್ದೇಶನದನ್ವಯ ನಿಗದಿತ ಕಾಲಾವಧಿಯೊಳಗೆ ಅರ್ಹರಿಗೆ ಸರ್ಕಾರದ ಸೌಕರ್ಯ ಪಡೆಯಲು ಅಗತ್ಯ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ ಎಂದರು.
ಇದೇ ವೇಳೆ ನಗರದ ರೈತರು, ಕೂಲಿ ಕಾರ್ಮಿಕರು, ವಯೋವೃದ್ದರು, ಸಾಮಾಜಿಕ ಭದ್ರತಾ ಯೋಜನೆಯಡಿಯ ಫಲಾನುಭವಿಗಳು ಇದ್ದರು. ಈ ವೇಳೆ ಸಾರ್ವಜನಿಕರಿಂದ ಕುಂದುಕೊರತೆಗಳ ವಿಚಾರಣೆ, ಸೂಕ್ತ ದಾಖಲೆಗಳನ್ನು ಪಡೆದು ಮಾಹಿತಿ ನೀಡಲಾಯಿತು.
ಉಪತಹಶೀಲ್ದಾರ್ ಚಂದ್ರಶೇಖರ್, ಶಿರಸ್ತೆದಾರ್ ಮಂಜುನಾಥ ಸ್ವಾಮಿ, ಅಟಲ್ ಜನಸ್ನೇಹಿ ಕೇಂದ್ರ ಗಣಕಯಂತ್ರದ ನಿರ್ವಾಹಕ ವೈ. ಕಾಂತರಾಜ್, ಗೋವಿಂದ್ ನಾಯ್ಕ, ಸಿಬ್ಬಂದಿಗಳಾದ ಜಯಣ್ಣ, ಶ್ರೀನಿವಾಸ್, ಶಿವಲೀಲಾ, ತಬಸುಮ್, ಅಸಿನಾ, ರೇಣುಕ, ಭೂಮಿಕೇಂದ್ರ ಗಣಕಯಂತ್ರದ ನಿರ್ವಾಹಕರಾದ ಗುರುಲಿಂಗಪ್ಪ, ನಿರ್ಮಲಾ, ಸುಷ್ಮಾ, ಪುಷ್ಪಲತಾ, ಸಾರ್ವಜನಿಕರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post