ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಯಕಶ್ಚಿತ್ ಒಂದು ಸೌತೆಕಾಯಿಯ ವಿಚಾರಕ್ಕಾಗಿ ಕಿರಾತಕ ಅಣ್ಣನೊಬ್ಬ ಸ್ವಂತ ತಂಗಿಯನ್ನೇ ಕೊಲೆ ಮಾಡಿರುವ ಕ್ರೂರ ಘಟನೆ ಚಾಮರಾಜನಗರ #Chamarajanagar ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ಮೃತ ಯುವತಿಯನ್ನು ಐಮಾನ್ ಬಾನು ಎಂದು ಗುರುತಿಸಲಾಗಿದ್ದು, ಆರೋಪಿ ಅಣ್ಣನನ್ನು ಫರ್ಮಾನ್ ಪಾಷಾ ಎಂದು ವರದಿಯಾಗಿದೆ.
Also Read>> ಗಮನಿಸಿ! ಬೀರೂರು ನಿಲ್ದಾಣದಲ್ಲಿ ಈ ರೈಲು ನಿಲುಗಡೆ ಮುಂದುವರಿಕೆ | ಎಲ್ಲಿಯವರೆಗೆ?
ಘಟನೆ ನಡೆದಿದ್ದು ಹೇಗೆ?
ನಿನ್ನೆ ರಾತ್ರಿ ಆರೋಪಿ ಫರ್ಮಾನ್ ಪಾಷಾ ಊಟ ಮಾಡುವ ವೇಳೆ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ #Cucumber ತಿನ್ನಿಸುತ್ತಿದ್ದ. ಆದರೆ ಮಗು ಜ್ವರದಿಂದ ಬಳಲುದ್ದ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದು ಆತನ ಅತ್ತಿಗೆ ತಸ್ಲೀಮ್ ತಾಜ್ ಹೇಳಿದ್ದಾರೆ.
ಇದನ್ನು ಕಂಡು ಆರೋಪಿ ತಂಗಿಯೂ ಸಹ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದು ಹೇಳಿ ನಿಂದಿಸಿದ್ದಾಳೆ. ತಂಗಿಯ ಮಾತಿನಿಂದ ಸಿಟ್ಟಿಗೆದ್ದ ಆರೋಪಿ ಪಾಷಾ, ಅಡುಗೆ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಕತ್ತಿಯಿಂದ ತನ್ನ ಸ್ವಂತ ತಂಗಿಯ ಕುತ್ತಿಗೆಗೆ ಚುಚ್ಚಿ, ಕೊಚ್ಚಿದ್ದಾನೆ.
ಈ ವೇಳೆ ಐಮಾನ್ ರಕ್ಷಣೆಗೆ ಬಂದ ಅತ್ತಿಗೆ ಮೇಲು ಫರ್ಮಾನ್ ಅಟ್ಯಾಕ್ ಮಾಡಿದ್ದಾನೆ. ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆ ಸೈಯದ್ ಪಾಷಾ ಮೇಲೂ ಹಂತಕ ಹಲ್ಲೆ ನಡೆಸಿದ್ದಾನೆ.
ಚೀರಾಟ ಕೂಗಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ತಾನೇ 112ಗೆ ಕರೆ ಮಾಡಿ ಪೊಲೀಸರನ್ನು ಮನೆಗೆ ಕರೆಸಿಕೊಂಡು ಫರ್ಮಾನ್ ಶರಣಾಗಿದ್ದಾನೆ.
ಗಂಭೀರ ಗಾಯಗೊಂಡ ಇಬ್ಬರನ್ನೂ ಚಾಮರಾಜನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post