ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಗಿದ್ದು, ಇದರಿಂದ 8 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ.
ದೇವಸ್ಥಾನದ ಕಲ್ಯಾಣ ಮಂಟಪದ ಆವರಣದಲ್ಲಿ ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಬಹಿರಂಗ ಹರಾಜು ನಡೆಸಲಾಯಿತು.

Also read: ಪಾರಂಪರಿಕ ಅರಣ್ಯ ನಾಶದಿಂದ ವನ್ಯ ಜೀವಿ ಸಂತತಿ ನಾಶ: ಬಿ.ಎಂ. ಕುಮಾರಸ್ವಾಮಿ ಆತಂಕ
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯ ವೆಂಕಟೇಶ್, ಪ್ರಮುಖರಾದ ವೇಣುಗೋಪಾಲ್ ಶೆಣೈ, ಸದಾನಂದ್ ಕಾಮತ್, ಗಣೇಶ್ ಮರಡಿ, ವಿಶ್ವನಾಥ್ ಕಾಮತ್, ಸಂಜು ಮೂರ್ತಿ, ನಾಗರಾಜ್ ಮಂಚೇರ್, ದೇವರಾಜ್, ಕಿರಣ್ ಅಂಚೆ, ಗಣಪತಿ ಮಂಚೇರ್, ಚಂದ್ರಗುತ್ತಿ ಆರಕ್ಷಕ ಠಾಣೆ ನಾಗೇಶ್, ಸೇರಿದಂತೆ ದೇವಸ್ಥಾನದ ಸಿಬ್ಬಂದಿಗಳು ಸುತ್ತಮುತ್ತ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)












Discussion about this post