ಕಲ್ಪ ಮೀಡಿಯಾ ಹೌಸ್ | ಮುಂಬೈ |
ವ್ಯಕ್ತಿಯೊಬ್ಬರ ತನ್ನೊಂದಿಗೆ ಲಿವ್ ಇನ್ ಪಾರ್ಟ್ನರ್ ಆಗಿದ್ದ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಕುಕ್ಕರಿನಲ್ಲಿ ಬೇಯಿಸಿರುವ ನಾಗರಿಕ ಸಮಾಜ ಬೆಚ್ಚಿ ಬೀಳುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ಮೀರಾ ರಸ್ತೆಯಲ್ಲಿನ ಬಾಡಿಗೆ ಅಪಾರ್ಟ್’ಮೆಂಟ್’ನಲ್ಲಿ ಈ ಘೋರ ಘಟನೆ ನಡೆದಿದ್ದು, ಆರೋಪಿಯನ್ನು ಮನೋಜ್(56) ಹಾಗೂ ಮೃತ ಮಹಿಳೆಯನ್ನು ಸರಸ್ವತಿ ವೈದ್ಯ(32) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ ನಯಾನಗರ ನಿವಾಸಿಗಳು ಪೊಲೀಸರು ಕರೆ ಮಾಡಿದ್ದು, ದಂಪತಿಯ ಫ್ಲಾಟ್’ನಿಂದ ದುರ್ವಾಸನೆ ಬರುತ್ತಿದೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ದಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ ವೇಳೆ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.
Also read: ಚಂದ್ರಗುತ್ತಿ ದೇಗುಲಕ್ಕೆ ಸಂದ ಹರಕೆ ವಸ್ತುಗಳ ಹರಾಜಿನಿಂದ ಎಷ್ಟು ಆದಾಯ ಬಂದಿದೆ?
ಘಟನೆಯ ಹಿನ್ನೆಲೆಯೇನು?
ಇಬ್ಬರೂ ಮೂರು ವರ್ಷಗಳಿಂದ ಒಂದೇ ಅಪಾರ್ಟ್’ಮೆಂಟ್’ನಲ್ಲಿ ಲಿವ್ ಇನ್ ರಿಲೇಷನ್’ನಲ್ಲಿ ವಾಸವಾಗಿದ್ದರು. ಆ ಮನೆಯಲ್ಲಿ ಪತ್ತೆಯಾದ ದೇಹದ ಭಾಗಗಳ ಕೊಳೆತಿರುವುದರಿಂದ ಎರಡು-ಮೂರು ದಿನಗಳ ಹಿಂದೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಯು ಇಷ್ಟು ದಿನ ದೇಹದ ಭಾಗಗಳೊಂದಿಗೆ ವಾಸಿಸುತ್ತಿದ್ದನೆಂದು ತೋರುತ್ತಿದೆ ಎಂದು ವರದಿಯಾಗಿದೆ.
3-4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಮನೋಜ್, ಟೀ ಕಟ್ಟರ್ ಅನ್ನು ಖರೀದಿಸಿ ಆಕೆಯ ದೇಹವನ್ನು 12-13 ತುಂಡು ಮಾಡಿದ್ದನು. ಬಳಿಕ, ಪ್ರೆ±ರರ್ ಕುಕ್ಕರ್’ನಲ್ಲಿ ಬೇಯಿಸಿ, ಹೊರಗೆ ಎಸೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಪೇಪರ್’ನಲ್ಲಿ ಸುತ್ತಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ಮನೋಜ್ ಅವರನ್ನು ಬಂಧಿಸಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post