ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಕನ್ನಡ ನಾಡಿನ ಇತಿಹಾಸ ಪ್ರಸಿದ್ಧವಾಗಿದ್ದು ನೆಲ ಮತ್ತು ಜಲ ವಿಷಯ ಬಂದಾಗ ರಾಜ್ಯದಲ್ಲಿ ಪ್ರತಿಯೊಬ್ಬರು ಒಗ್ಗಟ್ಟನ್ನು ಪ್ರದರ್ಶನ ಮಾಡಿದಾಗ ಮಾತ್ರ ನೆಲ ಮತ್ತು ಜಲವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಗ್ರಾ.ಪಂ ಸದಸ್ಯ ರೇಣುಕಾ ಪ್ರಸಾದ್ ಹೇಳಿದರು.
ಚಂದ್ರಗುತ್ತಿಯ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಗ್ರಾಮದ ಗಾಂಧಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಅನೇಕ ಮಹಾನುಭಾವರು ಪ್ರಾಣ ಬಲಿದಾನವನ್ನು ಮಾಡಿ ರಾಜ್ಯದ ಬಹಳಷ್ಟು ಗಣತಂತ್ರ ವ್ಯವಸ್ಥೆಯ ಬಗ್ಗೆ ಹಿಂದಿನಿಂದಲೂ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ, ಕನ್ನಡ ರಾಜ್ಯೋತ್ಸವ ಮನೆ ಮನೆಯಲ್ಲಿ ಹಬ್ಬವಾಗಬೇಕು ಎಂದರು,
ಜಾತ್ಯಾತೀತ ಮನೋಭಾವನೆಯನ್ನು ತೆಗೆದು ನಾವೆಲ್ಲರೂ ಕನ್ನಡಿಗರು ಎಂಬ ಒಗ್ಗಟ್ಟನ್ನು ಪ್ರದರ್ಶನ ಮಾಡಿದಾಗ ಮಾತ್ರ ರಾಜ್ಯ ಮತ್ತು ದೇಶವನ್ನು ಸದೃಢವಾಗಿ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಧ್ವಜಾರೋಹಣವನ್ನು ಊರಿನ ಪ್ರಮುಖರಾದ ವೇಣುಗೋಪಾಲ್ ಶೆಣೈ ನೆರವೇರಿಸಿದರು.
ಗ್ರಾ.ಪಂ ಅಧ್ಯಕ್ಷ ರತ್ನಾಕರ್ ಎಂಪಿ ಮಾತನಾಡಿ ಕನ್ನಡ ನಮ್ಮೆಲ್ಲರ ಮಾತೃಭಾಷೆ ಆಗಿದ್ದು ನಮ್ಮ ನಾಡು, ನಮ್ಮ ಭಾಷೆ, ನೆಲ, ಜಲ, ಸಂಸ್ಕೃತಿ, ಹಾಗೂ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಹ ಕೆಲಸವಾಗಬೇಕು ಎಂದು ಹೇಳಿದರು.
ಕನ್ನಡ ರಾಜ್ಯತ್ಸವ ಹಾಗೂ ಕನ್ನಡ ಸಂಘಟನೆಗಳ ಕಾರ್ಯಕ್ರಮವು ನಮಗೆ ತುಂಬಾ ಸಂತಸವನ್ನು ತಂದುಕೊಟ್ಟಿದೆ. ನಮ್ಮ ನಾಡು, ನುಡಿ, ಜಲ, ಹಾಗೂ ಕನ್ನಡದ ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಮುಂದುವರೆಯಲಿ.
-ವೇಣುಗೋಪಾಲ್ ಶೆಣೈ ಊರಿನ ಹಿರಿಯರು ಚಂದ್ರಗುತ್ತಿ.
ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಪಕೀರಪ್ಪ ಮಾತನಾಡಿದರು, ಊರಿನ ಪ್ರಮುಖರಾದ ಕೃಷ್ಣಣ್ಣ ಕಾಮತ್, ಉಮ್ಮರ್ ಸಾಬ್, ಯಶ್ವಂತಪ್ಪ ಶಿಕ್ಷಕರು, ವಾಸುದೇವ್ ಶಿಕ್ಷಕರು, ನಾಗರಾಜ್ ಎನ್.ಜಿ, ಗಣೇಶ್ ಮರಡಿ, ಮಂಜಪ್ಪ, ದಿನೇಶ್, ಜಗದೀಶ್ ಭಟ್, ಪ್ರಸನ್ ಶೇಟ್, ಪ್ರವೀಣ್ ಮಿರ್ಜಿ, ರವಿ ಭಟ್, ಹಯಾತ್ ಸಾಬ್, ಪುಟ್ಟಪ್ಪ ಸೇರಿದಂತೆ ಊರಿನ ಎಲ್ಲಾ ಗಣ್ಯರು ಶಾಲೆಯ ಶಿಕ್ಷಕರು ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post