ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಮುಂದಿನ ಪೀಳಿಗೆಗೂ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಎಂದು ಶ್ರೀ ರೇಣುಕಾಂಬ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷ ಮಂಜಪ್ಪ ಪಿ, ಹೇಳಿದರು.
ಚಂದ್ರಗುತ್ತಿ ಶ್ರೀ ರೇಣುಕಾಂಬ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಶ್ರೀ ರೇಣುಕಾಂಬ ಆಟೋ ಮಾಲೀಕರ ಮತ್ತು ಚಾಲಕರ ಸಂಘವು ಸತತ 14 ನೇ ವರ್ಷದಿಂದ 15 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕನ್ನಡ ರಾಜ್ಯೋತ್ಸವವನ್ನು ಸಂಘದ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಿದ್ದೇವೆ ಎಂದರು.
ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರವಿ ಮಾತನಾಡಿ, ದುಡಿಯುವಂತಹ ನೆಲ ಕನ್ನಡ, ಕನ್ನಡಾಂಬೆಯ ಭೂಮಿಯಲ್ಲಿ ಹುಟ್ಟಿ ಕನ್ನಡವನ್ನು ಬೆಳೆಸಿ ಉಳಿಸಬೇಕು, ಸಾವಿರಾರು ಮಹಾನುಭಾವರು ಕನ್ನಡಕ್ಕಾಗಿ ಜೀವ ತ್ಯಾಗ ಮಾಡಿದ ಮಹತ್ವವಿದೆ. ಕಷ್ಟ ಸುಖ ಏನೇ ಬಂದರೂ ಕನ್ನಡದ ಬಗ್ಗೆ ಅಭಿಮಾನವಿರಬೇಕು ಮಾತನಾಡುವ ಭಾಷೆ ಕನ್ನಡವಾಗಿರಬೇಕು ತಾಯಿ ನೀಡಿದ ಜನುಮ ತಾಯಿ ನಾಡಿಗಾಗಿ ಮೆರೆಯಲಿ, ಭಾವನೆಗಳು ನೂರು ಇರಬಹುದು ಆದರೆ ನಮ್ಮ ಭಾಷೆ ಎಂದಿಗೂ ಕನ್ನಡವೇ ಎಂದರು.
ನಂತರ ಕನ್ನಡಾಂಬೆಯ ಭಾವಚಿತ್ರವನ್ನು ವಾಹನಕ್ಕೆ ಅಳವಡಿಸಿಕೊಂಡು ಆಟೋಗಳನ್ನು ಕನ್ನಡ ಬಾವುಟಗಳಿಂದ ಅಲಂಕರಿಸಿಕೊಂಡು ಕನ್ನಡದ ಗೀತೆಗಳ ಮೂಲಕ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.
Also read: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಆರೋಪ ಓರ್ವನ ಬಂಧನ
ಚಂದ್ರಗುತ್ತಿ ಗ್ರಾ.ಪಂ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಶನಿವಾರದಂದು ಭಾರತೀಯ ಸಂವಿಧಾನ ಪೀಠಿಕೆ ದಿನಾಚರಣೆಯ ಅಂಗವಾಗಿ ಗ್ರಂಥಾಲಯದ ಮೇಲ್ವಿಚಾರಕ ರವಿಕಿರಣ್ ಅವರು ರಂಗನಾಥ ಶಾಲಾ ಮಕ್ಕಳಿಗೆ ಭಾರತೀಯ ಸಂವಿಧಾನ ಪೀಠಿಕೆಯನ್ನು ಭೋದನೆ ಮಾಡಿಸಿದರು. ಭಾರತದ ಪ್ರಜೆಗಳಾದ ನಾವುಗಳು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮತ್ತು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭಾತೃತ್ವ ಭಾವನೆಗಳನ್ನು ಮೂಡಿಸುವುದಕ್ಕಾಗಿ ಎಲ್ಲರೂ ದೃಢ ಸಂಕಲ್ಪ ಮಾಡಿದರು.
ನಿವೃತ್ತಿ ಶಿಕ್ಷಕ ಯಶವಂತಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸಾವಿತ್ರಮ್ಮ, ಆಟೋ ಸಂಘದ ಸದಸ್ಯರಾದ ಪ್ರಕಾಶ್, ಹುಚ್ಚಪ್ಪ, ಚಂದ್ರು ಗದ್ದೆಮನೆ, ಜನಪ್ರಿಯ ರಾಘವೇಂದ್ರ, ಶಿವರಾಜ್ ಗದ್ದೆಮನೆ, ಪ್ರತಾಪ್, ರಾಜು, ಸಚಿನ್, ಲವ, ಅಶೋಕ್, ರಾಘು, ಅಭಿ, ಪ್ರದೀಪ್ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















